Publish Date: Sun, 16 Jun 2019 (09:22 IST)
Updated Date: Sun, 16 Jun 2019 (09:24 IST)
ಬೆಂಗಳೂರು : ರಾಜ್ಯ ಸಮ್ಮಿಶ್ರ ಸರ್ಕಾರದ ವಿರುದ್ಧ ಅಹೋರಾತ್ರಿ ಹೋರಾಟ ನಡೆಸುತ್ತಿರುವ ಬಿಜೆಪಿ ಇಂದು ಸಿಎಂ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಆ ವೇಳೆ ದರ್ಶನ ನೀಡಿ ಎಂದು ಸಿಎಂ ಕುಮಾರಸ್ವಾಮಿಗೆ ಮಾಜಿ ಡಿಸಿಎಂ ಆರ್ ಅಶೋಕ್ ವ್ಯಂಗ್ಯಮಾಡಿದ್ದಾರೆ.
ಅಹೋರಾತ್ರಿ ಧರಣಿ ವೇಳೆ ಮಾತನಾಡಿದ ಅವರು, ನಿಮ್ಮ ನಿವಾಸಕ್ಕೆ ಮುತ್ತಿಗೆ ಹಾಕಲು ಬಂದಾಗ ದಯಮಾಡಿ ತಮ್ಮ ದರ್ಶನ ನೀಡಿ. ಸೌತ್ ಎಂಡ್‍ನಲ್ಲಾ? ವೆಸ್ಟ್ ಎಂಡ್‍ನಲ್ಲಾ? ಮುಖ್ಯಮಂತ್ರಿಗಳೇ ಎಲ್ಲಿದ್ದೀರಾ ಎಂದು ಲೇವಡಿ ಮಾಡಿದ್ದಾರೆ.
ಮುಖ್ಯಮಂತ್ರಿಗಳಿಗೆ ಆ ಕಡೆ ದೇವರಿಲ್ಲ. ಈ ಕಡೆ ಜನಾನೂ ಇಲ್ಲವಂತೆ. ಶೃಂಗೇರಿ ಆಯ್ತು, ತಿರುಪತಿನೂ ಆಯ್ತು. ದೇವರೇ ನಿಮ್ಮನ್ನ ಸೋಲಿಸಿದ್ದಾರೆ. ಹಾಸನ, ತುಮಕೂರು ಹಾಗೂ ಮಂಡ್ಯ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು `ಮೂರು’ ನಾಮ ಹಾಕೊಂಡರು ಎಂದು ವ್ಯಂಗ್ಯವಾಡಿದ್ದಾರೆ.
pavithra
Publish Date: Sun, 16 Jun 2019 (09:22 IST)
Updated Date: Sun, 16 Jun 2019 (09:24 IST)