Select Your Language

Notifications

webdunia
webdunia
webdunia
webdunia

ಸಂಕಷ್ಟ ಚತುರ್ಥಿ ದಿನ ಬಿಳಿ ಎಕ್ಕೆ ಗಿಡಕ್ಕೆ ಹೀಗೆ ಮಾಡಿದರೆ ಸಕಲ ಕಷ್ಟಗಳು ಪರಿಹಾರವಾಗುವುದು

ಸಂಕಷ್ಟ ಚತುರ್ಥಿ ದಿನ ಬಿಳಿ ಎಕ್ಕೆ ಗಿಡಕ್ಕೆ ಹೀಗೆ ಮಾಡಿದರೆ ಸಕಲ ಕಷ್ಟಗಳು ಪರಿಹಾರವಾಗುವುದು
ಬೆಂಗಳೂರು , ಭಾನುವಾರ, 16 ಜೂನ್ 2019 (08:49 IST)
ಬೆಂಗಳೂರು : ನಮ್ಮ ಹಿಂದೂ ಪುರಾಣದಲ್ಲಿ ಬಿಳಿ ಎಕ್ಕದ ಗಿಡಕ್ಕೆ ಬಾರೀ ಮಹತ್ವವಿದೆ. ಇದು ಹೆಚ್ಚು ಔಷಧಿಯ ಗುಣಗಳನ್ನು ಹೊಂದಿರುವುದ್ದಲ್ಲದೇ ದೇವತಾ ಗುಣಗಳನ್ನು ಹೊಂದಿದೆ. ಈ ಗಿಡವನ್ನು ಸಂಕಲ್ಪ ಮಾಡಿ ಪೂಜಿಸುವುದರಿಂದ ಅನೇಕ ಸಮಸ್ಯೆಗಳು ಪರಿಹಾರವಾಗಿ ಶುಭಫಲ ದೊರಕುತ್ತದೆಯಂತೆ.




ಹೌದು. ಈ ಬಿಳಿ ಎಕ್ಕದ ಗಿಡ ಗಣಪತಿಯ ವಾಸಸ್ಥಳ ಎಂದು ಹೇಳುತ್ತಾರೆ. ಆದ್ದರಿಂದ ಈ ಬಿಳಿಎಕ್ಕ ಗಿಡವನ್ನು ಈ ರೀತಿ ಪೂಜೆ ಮಾಡಿದರೆ ಅವರ ಎಲ್ಲಾ ಸಂಕಷ್ಟ ಕಳೆಯುತ್ತದೆ ಎಂದು ಹೇಳುತ್ತಾರೆ. ಹಣಕಾಸಿನ  ಸಮಸ್ಯೆ, ಸಾಲಬಾಧೆ, ಅನಾರೋಗ್ಯದ ಸಮಸ್ಯೆ, ಪತಿ ಪತ್ನಿ ಕಲಹ, ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಸಾಕ್ಷಾತ್ ಗಣಪತಿ ತಿಳಿಸಿರುವ ಈ ಪರಿಹಾರವನ್ನು ಮಾಡಿ.


ಬಿಳಿ ಎಕ್ಕ ಗಿಡವನ್ನು ಸೂರ್ಯೋದಯಕ್ಕೂ ಮುನ್ನ 3,5,9, 21 ದಿನ ಈ ರೀತಿ ಪೂಜಿಸಿದರೆ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.ಈ ಪೂಜೆಯನ್ನು ಸಂಕಷ್ಟಿ ದಿನವೇ ಪ್ರಾರಂಭ ಮಾಡಬೇಕು. ಬೆಳಿಗ್ಗೆ 4-6 ಗಂಟೆಯಳಗೆ ಎದ್ದು, ಸ್ನಾನ ಮಾಡಿ ಅರಶಿನ, ಕುಂಕುಮ,ಅಕ್ಷತೆ, ಹಳದಿ ಬಣ್ಣದ ಹೂವು ಹಾಗೂ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಬಿಳಿ ಎಕ್ಕ ಗಿಡದ ಬಳಿ ಹೋಗಿ ಮೊದಲಿಗೆ ನೀರನ್ನು ಅದರ ಮೇಲೆ ಎರೆದು, ಅರಶಿನ ಕುಂಕುಮ ಹಚ್ಚಿ ಹೂವನ್ನು ಮುಡಿಸಬೇಕು, ನಂತರ ಸ್ವಲ್ಪ ಅಕ್ಷತೆ ಕಾಳನ್ನು ಗಿಡದ ಬುಡಕ್ಕೆ ಹಾಕಬೇಕು. ನಂತರ ಸಮಸ್ಯೆಗಳನ್ನು ಪರಿಹರಿಸುವಂತೆ ಸಂಕಲ್ಪ ಮಾಡಬೇಕು. ಬಳಿಕ  ಉಳಿದ ಅಕ್ಷತೆಯನ್ನು ಮನೆಗೆ ತಂದು ಬಟ್ಟೆಯಲ್ಲಿ ಕಟ್ಟಿ ದೇವರ ಮನೆಯಲ್ಲಿಟ್ಟು ಪ್ರತಿದಿನ ಪೂಜೆ ಮಾಡಬೇಕು. ಹೀಗೆ ಮಾಡಿದರೆ ಸಕಲ ಸಂಕಷ್ಟಗಳು ಪರಿಹಾರವಾಗುತ್ತದೆಯಂತೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಕಲಶದ ಕೆಳಗೆ ಅಕ್ಕಿಯನ್ನು ಹಾಕುವುದು ಯಾಕೆ ಗೊತ್ತಾ?