Select Your Language

Notifications

webdunia
webdunia
webdunia
webdunia

ಮೈತ್ರಿ ಸರ್ಕಾರಕ್ಕೆ ಬಿಗ್ ಶಾಕ್; ಸರ್ಕಾರದ ಮೇಲೆ ಬೇಸರಗೊಂಡು ಭರವಸೆ ಸಮಿತಿಯ ಅಧ್ಯಕ್ಷ ರಾಜೀನಾಮೆ

ಮೈತ್ರಿ ಸರ್ಕಾರಕ್ಕೆ ಬಿಗ್ ಶಾಕ್; ಸರ್ಕಾರದ ಮೇಲೆ ಬೇಸರಗೊಂಡು ಭರವಸೆ ಸಮಿತಿಯ ಅಧ್ಯಕ್ಷ ರಾಜೀನಾಮೆ
ಬೆಂಗಳೂರು , ಶನಿವಾರ, 15 ಜೂನ್ 2019 (11:22 IST)
ಬೆಂಗಳೂರು : ಭೂಕಬಳಿಕೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆ ಮೈತ್ರಿ ಸರ್ಕಾರದ ಮೇಲೆ ಬೇಸರಗೊಂಡು ಭರವಸೆಗಳ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ.




ಕೆಂಗೇರಿ ಸಮೀಪದ ಬಿಎಂ ಕಾವಲು ಪ್ರದೇಶದಲ್ಲಿ 305 ಎಕರೆ ಭೂಗಳ್ಳರ ಪಾಲಾಗಿದೆ. ಈ ವಿಚಾರವನ್ನು ಶಾಸಕರು ಕಳೆದ ಬೆಳಗಾವಿ ಅಧಿವೇಶನದಲ್ಲೂ ಸರ್ಕಾರದ ಗಮನಕ್ಕೆ ತಂದಿದ್ದರು. ಆದರೆ ಭೂಗಳ್ಳರಿಂದ ಸರ್ಕಾರಿ ಭೂಮಿ ವಶಕ್ಕೆ ಪಡೆಯಲು ಮೈತ್ರಿ ಸರ್ಕಾರ ಹಿಂದೆ ಸರಿದ ಕಾರಣ ಬೇಸರಗೊಂಡು ರಾಮಸ್ವಾಮಿ ಅವರು ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.


ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ರಾಜಾಜಿ ನಗರ ಬಿಜೆಪಿ ಶಾಸಕ ಸುರೇಶ್ ಕುಮಾರ್, ಸರ್ಕಾರದ ಭರವಸೆ ಸಮಿತಿಯ ಅಧ್ಯಕ್ಷ ಎ.ಟಿ.ರಾಮಸ್ವಾಮಿಯವರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡು ಸರ್ಕಾರದ ಭರವಸೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ದಿನೇಶ್ ಗುಂಡುರಾವ್