ಹೆಂಡತಿ ಹಾಗೂ ಮಗನಿಗೆ ಕೊರೊನಾ ವೈರಸ್ ನ ರಿಪೋರ್ಟ್ ಪಾಸಿಟಿವ್ ಬಂದಿದ್ದಕ್ಕೆ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ಹೆಸರುಘಟ್ಟದಲ್ಲಿ ಈ ಘಟನೆ ನಡೆದಿದ್ದು, ದೊಡ್ಡಬಳ್ಳಾಪುರದ ನಾಗರಾಜ್ (55) ಆತ್ಮಹತ್ಯೆಗೆ ಶರಣಾದವರು ಎಂದು ಗುರುತಿಸಲಾಗಿದೆ.
ನಾಗರಾಜ್ ನ ಪತ್ನಿ ಹಾಗೂ ಮಗನಿಗೆ ಕೋವಿಡ್ ಟೆಸ್ಟ್ ಮಾಡಿಸಿದಾಗ ಪಾಸಿಟಿವ್ ಬಂದಿದೆ. ಹೀಗಾಗಿ ಏರಿಯಾ ಸೀಲ್ ಡೌನ್ ಮಾಡಲಾಗಿದೆ.
ಸೀಲ್ ಡೌನ್ ಆಗಿದ್ದರಿಂದ ನೆರೆಹೊರೆಯ ಜನರು ನಾಗರಾಜ್ ಹಾಗೂ ಕುಟುಂಬದವರಿಗೆ ಅಪಮಾನ ಮಾಡಿದ್ದಿಂದಾಗಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.