ಆಗ ತಾನೆ ಹುಟ್ಟಿದ ಮಗುವನ್ನು ಅದಲು ಬದಲು ಮಾಡಲಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ. 
									
										
								
																	
ಮಹಿಳೆಯೊಬ್ಬರು ಶಿಶುವಿಗೆ ಜನ್ಮ ನೀಡಿದ್ದು, ನರ್ಸ್ ವೊಬ್ಬರು ನಿಮಗೆ ಗಂಡು ಮಗು ಜನಿಸಿದೆ ಎಂದು ಹೇಳಿದ್ದಾರೆ.
									
			
			 
 			
 
 			
					
			        							
								
																	ಸಹಜವಾಗಿಯೇ ದಂಪತಿ ಸಂತಸಗೊಂಡಿದ್ದರು. ಆದರೆ ಅವರ ಈ ಸಂತಸ ಬಹಳ ಸಮಯ ಉಳಿಯಲಿಲ್ಲ. 
ಗಂಡು ಮಗು ಜನಿಸಿದೆ ಎಂದು ಹೇಳಿದ ಬಳಿಕ, ಆ ದಂಪತಿ ಕೈಗೆ ಆಸ್ಪತ್ರೆಯವರು ಹೆಣ್ಣು ಮಗುವನ್ನು ಕೊಟ್ಟಿದ್ದಾರೆ. ಇದರಿಂದ ದಂಪತಿ ರೋಸಿ ಹೋಗಿದ್ದಾರೆ.
									
										
								
																	ಅಷ್ಟೇ ಅಲ್ಲ, ಮಗುವನ್ನು ಅದಲು ಬದಲು ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಿಸಿದ್ದಾರೆ. ಅಂದ್ಹಾಗೆ ಸೋಲಾ ಸಿವಿಲ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.