Publish Date: Mon, 20 Jul 2020 (21:09 IST)
Updated Date: Mon, 20 Jul 2020 (21:11 IST)
ಆಸ್ಪತ್ರೆಗಳಿಗೆ ಅಲೆದಾಡಿದರೂ ಸೂಕ್ತ ಚಿಕಿತ್ಸೆ ದೊರಕದೇ ಮಗುವೊಂದು ನರಳಿ ನರಳಿ ಜೀವ ಬಿಟ್ಟ ಘಟನೆ ನಡೆದಿದೆ.
7 ತಿಂಗಳ ಹೆಣ್ಣು ಮಗು ಚಿಕಿತ್ಸೆ ಸಿಗದೆ ಸಾವನ್ನಪ್ಪಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಚಿಕಿತ್ಸೆಗಾಗಿ ಅಲೆದರೂ ಚಿಕಿತ್ಸೆ ದೊರಕದ ಕಾರಣ ಮಗು ಸಾವವನ್ನಪ್ಪಿದೆ.
ರಾಮನಗರದ ಚನ್ನಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪೇಟೆಬೀದಿ ನಿವಾಸಿ ಪ್ರದೀಪ್ ಅವರ ಪುತ್ರಿ ಜೀವ ಬಿಟ್ಟಿದ್ದಾಳೆ.
ಮಗುವಿಗೆ ಉಸಿರಾಟದ ತೊಂದರೆ ಹಿನ್ನಲೆಯಲ್ಲಿ ಚನ್ನಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ
ಅಲ್ಲಿ ಮಕ್ಕಳ ವೈದ್ಯರು ಇಲ್ಲಾ ಬೇರೆ ಕಡೆ ಕರೆದುಕೊಂಡು ಹೋಗಿ ಅಂದಿದ್ದಾರೆ.
ಖ್ಯಾತ ಮಕ್ಕಳ ತಜ್ಞ ರಾಜಣ್ಣ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿನ ವೈದ್ಯ ರಾಜಣ್ಣ ಮಗುವಿನ ಸ್ಥಿತಿ ಗಂಭೀರವಾಗಿದೆ ಬೇರೆಡೆ ಕರೆದುಕೊಂಡು ಹೋಗಿ ಅಂದಿದ್ದಾರೆ.
ಅಲ್ಲಿಂದ ಬಿ.ಜಿ.ಲಿಂಗೇಗೌಡ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗು ಸಾವನ್ನಪ್ಪಿದೆ ಅಂತಾ ತಿಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಅಲ್ಲಿಯು ಮಗು ಸಾವನ್ನಪ್ಪಿದೆ ಅಂತಾ ಹೇಳಿದ್ದಾರೆ.