Publish Date: Mon, 20 Jul 2020 (09:24 IST)
Updated Date: Mon, 20 Jul 2020 (09:27 IST)
ಬೆಂಗಳೂರು: ಹಿರಿಯ ನಟಿ ಶಾಂತಮ್ಮ ನಿನ್ನೆ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಎನ್ನಲಾಗಿದೆ.
ಕನ್ನಡ ಸಿನಿಮಾಗಳಲ್ಲಿ ಅಜ್ಜಿ, ಅಮ್ಮನಾಗಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದ ಶಾಂತಮ್ಮ ವಿಶೇಷವಾಗಿ ಡಾ. ರಾಜ್ ಮನೆಯ ಸದಸ್ಯರಂತೇ ಇದ್ದವರು.
ಆದರೆ ಅವರು ಸಾಯುವ ಕೆಲವು ಕ್ಷಣಗಳ ಅನುಭವಿಸಿದ ಕಷ್ಟ ಕಣ್ಣೀರು ಮಿಡಿಯುವಂತಿದೆ. ಆಂಬ್ಯುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನ ನಡೆಸಿದ ಕುಟುಂಬಸ್ಥರು ಆಸ್ಪತ್ರೆ ಸಿಗದೇ ಪರದಾಡಿದ್ದಾರೆ. ಕೊರೋನಾದಿಂದಾಗಿ ಅವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಗಲಿಲ್ಲ ಎನ್ನಲಾಗಿದೆ.