Select Your Language

Notifications

webdunia
webdunia
webdunia
webdunia

ಸಿನಿಮಾಗೆ ಕಮ್ ಬ್ಯಾಕ್ ಮಾಡಿ ಎಂದ ಅಭಿಮಾನಿಗೆ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?

ಸಿನಿಮಾಗೆ ಕಮ್ ಬ್ಯಾಕ್ ಮಾಡಿ ಎಂದ ಅಭಿಮಾನಿಗೆ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 18 ಜುಲೈ 2020 (10:04 IST)
ಬೆಂಗಳೂರು: ಇಬ್ಬರು ಮುದ್ದಿನ ಮಕ್ಕಳ ತಾಯಿಯಾದ ಮೇಲೆ ನಟಿ ರಾಧಿಕಾ ಪಂಡಿತ್ ಸಿನಿಮಾದಲ್ಲಿ ಅಭಿನಯಿಸಿಲ್ಲ. ತಮ್ಮ ಸಂಸಾರದಲ್ಲೇ ಬ್ಯುಸಿಯಾದರೂ ರಾಧಿಕಾ ಈಗಲೂ ತೆರೆ ಮೇಲೆ ಬರಲಿ ಎಂದು ಅವರ ಅಸಂಖ್ಯಾತ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ.


ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ನಿನ್ನೆ ತಮ್ಮದೇ ಫೋಟೋವೊಂದನ್ನು ಹಾಕಿಕೊಂಡಿದ್ದರು. ಅದನ್ನು ನೋಡಿ ಅಭಿಮಾನಿಯೊಬ್ಬರು ನೀವು ತೆರೆಮೇಲೆ ಯಾವಾಗ ಬರುತ್ತೀರಿ? ನಿಮ್ಮನ್ನು ನೋಡಲು ಕಾಯುತ್ತಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ರಾಧಿಕಾ ಖಂಡಿತಾ ಬರ್ತೀನಿ ಎಂದು ಅಭಿಮಾನಿಗಳಿಗೆ ಖುಷಿಯಾಗುವ ಸುದ್ದಿ ನೀಡಿದ್ದಾರೆ. ಹಿಂದೆಯೂ ರಾಧಿಕಾ ಇದೇ ಮಾತನ್ನು ಹೇಳಿದ್ದರು. ಸಿನಿಮಾದಿಂದ ಸಂಪೂರ್ಣವಾಗಿ ಹೊರಬಂದಿಲ್ಲ. ಮುಂದೊಂದು ದಿನ ಖಂಡಿತಾ ಕಮ್ ಬ್ಯಾಕ್ ಮಾಡುವೆ ಎಂದಿದ್ದರು. ಅದು ನಟಿಯಾಗಿಯೂ ಆಗಿರಬಹುದು, ತೆರೆ ಹಿಂದಿನ ಪಾತ್ರದ ಮೂಲಕವೂ ಆಗಿರಬಹುದು ಎಂದು ರಾಧಿಕಾ ಸುಳಿವು ನೀಡಿದ್ದರು. ಇದೀಗ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ನೀಡಿರುವ ಉತ್ತರದಿಂದ ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿರ್ದೇಶಕ ಪ್ರೇಮ್ ಗೆ ಮಾತೃ ವಿಯೋಗ