Select Your Language

Notifications

webdunia
webdunia
webdunia
webdunia

ಸಿನಿಮಾ ವಿಮರ್ಶೆ: ‘ಲಾ’ನಲ್ಲಿ ಲಾಜಿಕ್ ಗಾಗಿ ಹುಡುಕಬೇಡಿ!

ಸಿನಿಮಾ ವಿಮರ್ಶೆ: ‘ಲಾ’ನಲ್ಲಿ ಲಾಜಿಕ್ ಗಾಗಿ ಹುಡುಕಬೇಡಿ!
ಬೆಂಗಳೂರು , ಶನಿವಾರ, 18 ಜುಲೈ 2020 (09:53 IST)
ಬೆಂಗಳೂರು: ಬಹಳ ದಿನಗಳ ನಂತರ ಕನ್ನಡ ಸಿನಿಮಾವೊಂದು ರಿಲೀಸ್ ಆದ ಖುಷಿಯಲ್ಲಿ ಸ್ಯಾಂಡಲ್ ವುಡ್ ಇದೆ. ಚಿತ್ರಮಂದಿರದಲ್ಲಿ ಸಾಧ‍್ಯವಾಗದೇ ಇದ್ದರೂ ಅಮೆಝೋನ್ ಆಪ್ ಮೂಲಕ ‘ಲಾ’ ಎಂಬ ಥ್ರಿಲ್ಲರ್ ಸಿನಿಮಾವೊಂದು ಬಿಡುಗಡೆಯಾಗಿದೆ.


ಪುನೀತ್ ರಾಜಕುಮಾರ್ ಅವರ ‘ಪಿಆರ್ ಕೆ’ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾದ ‘ಲಾ’ ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್ ನಾಯಕಿ. ಇಲ್ಲಿ ನಾಯಕಿಗೇ ಪ್ರಾಧಾನ್ಯತೆಯಿರುವುದು. ನಾಯಕಿ ಒಬ್ಬ ಲಾ ಸ್ಟೂಡೆಂಟ್. ಆದರೆ ಒಂದು ರಾತ್ರಿ ಮೂರು ಜನ ದುರುಳರಿಂದ ಗ್ಯಾಂಗ್ ರೇಪ್ ಗೊಳಗಾಗುತ್ತಾಳೆ. ತನಗಾದ ಅನ್ಯಾಯದ ವಿರುದ್ಧ ಆಕೆ ಹೇಗೆ ಹೋರಾಡುತ್ತಾಳೆ, ಆಕೆಗೆ ಎದುರಾಗುವ ಸವಾಲುಗಳೇನು ಎಂಬುದೇ ಕತಾ ವಸ್ತು.

ಮಗಳಿಗಾದ ಅನ್ಯಾಯ ಕಂಡರೂ ಸುಮ್ಮನಿರುವ ತಂದೆ ಪಾತ್ರದಲ್ಲಿ ಅವಿನಾಶ್ ಅಭಿನಯಿಸಿದ್ದಾರೆ. ಆದರೆ ಮಗಳು ಸುಮ್ಮನಿರುವಂತೆ ಮಾಡಲು ಪೊಲೀಸರಿಗೆ ತಂದೆಯೇ ಲಂಚ ಕೊಡುವ ಸೀನ್ ಕೊಂಚ ವಿಚಿತ್ರ ಎನಿಸಬಹುದು. ಇನ್ನು, ಗ್ಯಾಂಗ್ ರೇಪ್ ಗೊಳಗಾದ ಒಬ್ಬ ಯುವತಿ ಮುಖದಲ್ಲಿ ಕಾಣಬೇಕಾದ ನೋವು, ಆಕ್ರೋಶ ಕೆಲವೊಮ್ಮೆ ನಾಯಕಿ ನಂದಿನಿ ಮುಖದಲ್ಲಿ ಕಾಣಿಸುವುದೇ ಇಲ್ಲ. ಆಕೆ ಆರಾಮವಾಗಿರುವುದು ನೋಡುವಾಗ ಎಲ್ಲೋ ಏನೋ ಮಿಸ್ ಹೊಡೆದಂತೆ ಅನಿಸಿದರೆ ನಿಮ್ಮ ತಪ್ಪಲ್ಲ.

ಆದರೆ ಅಭಿನಯದ ವಿಚಾರದಲ್ಲಿ ರಾಗಿಣಿಗೆ ಪ್ಲಸ್ ಮಾರ್ಕ್ ಕೊಡಲೇಬೇಕು. ಇನ್ನು ಪೊಲೀಸ್ ಅಧಿಕಾರಿ ಪಾತ್ರ ಮಾಡಿರುವ ಮಂಡ್ಯ ರಮೇಶ್ ಕೊಂಚ ಹೆಚ್ಚೇ ‘ಉಡಾಫೆ’ ಮಾಡಿದ್ದಾರೆ ಎನಿಸುತ್ತದೆ. ನಿಜ ಹೇಳಬೇಕೆಂದರೆ ಇಲ್ಲೊಂದು ಉತ್ತಮ ಕತೆಯಿದೆ. ಆದರೆ ಅದನ್ನು ಅಷ್ಟೇ ಗಂಭೀರವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ರಘು ಸಮರ್ಥ್ ಕೊಂಚ ಎಡವಿದ್ದಾರೆ ಎಂದೇ ಹೇಳಬಹುದು. ಪುನೀತ್ ನಿರ್ಮಾಣದ ಹಿಂದಿನ ಸಿನಿಮಾಗಳಾದ ‘ಕವಲುದಾರಿ’, ‘ಮಾಯಾಬಜಾರ್ 2016’ ಸಿನಿಮಾಗಳನ್ನು ಹೋಲಿಸಿದರೆ ಈ ಮೂರನೇ ಕಾಣಿಕೆ ಸಪ್ಪೆ ಎನಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೋನಾ ಸೋಂಕಿಗೆ ಸಾವಿಗೀಡಾದ ಹಿರಿಯ ನಟ ಹುಲಿವಾನ್ ಗಂಗಾಧರ್