Publish Date: Sat, 18 Jul 2020 (09:42 IST)
Updated Date: Sat, 18 Jul 2020 (09:43 IST)
ಬೆಂಗಳೂರು: ಲಾಕ್ ಡೌನ್ ಮುಗಿದು ಈಗಷ್ಟೇ ಧಾರವಾಹಿಗಳು ಶುರುವಾಗಿದ್ದವು. ರಿಯಾಲಿಟಿ ಶೋಗಳು ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದವು. ಆಗಲೇ ಮತ್ತೆ ಲಾಕ್ ಡೌನ್ ಬರೆ ಕಿರುತೆರೆ ವಾಹಿನಿಯನ್ನು ಹೈರಾಣಾಗಿಸಿದೆ.
ಜೀ ಕನ್ನಡದಲ್ಲಿ ಈ ವಾರದಿಂದ ಸರಿಗಮಪ ಶೋ ಪುನರಾರಂಭಗೊಳ್ಳುತ್ತಿದೆ. ಆದರೆ ಈಗ ಮತ್ತೆ ಲಾಕ್ ಡೌನ್ ಆಗಿದ್ದು ಮುಂದಿನ ಎಪಿಸೋಡ್ ಗಳ ಚಿತ್ರೀಕರಣಕ್ಕೆ ತೊಂದರೆಯಾಗಿದೆ.
ಕಲರ್ಸ್ ವಾಹಿನಿ ನಮ್ಮನೆ ಯುವರಾಣಿ ಧಾರವಾಹಿ ತಂಡ ಈಗಾಗಲೇ ಇನ್ನು ಮುಂದಿನ ಎಪಿಸೋಡ್ ಗಳನ್ನು ಲಾಕ್ ಡೌನ್ ಮುಗಿದ ಮೇಲೆ ನೋಡಬಹುದು ಎಂದು ಪ್ರಕಟಣೆ ನೀಡಿದೆ. ಈ ವಾಹಿನಿಯ ರಿಯಾಲಿಟಿ ಶೋಗಳು ಯಾವುದೂ ಆರಂಭವೇ ಆಗಿರಲಿಲ್ಲ. ಆದರೆ ಇದೀಗ ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದ ಕಿರುತೆರೆ ವಾಹಿನಿಗಳಿಗೆ ಈ ಲಾಕ್ ಡೌನ್ ಮತ್ತೊಂದು ಹೊಡೆತ ನೀಡಲಿದೆ.