Publish Date: Sat, 18 Jul 2020 (13:31 IST)
Updated Date: Sat, 18 Jul 2020 (13:34 IST)
ಬೆಂಗಳೂರು: ಕನ್ನಡ, ತೆಲುಗು, ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿ ಅಕಾಲಿಕವಾಗಿ ಮರೆಯಾದ ನಟಿ ಸೌಂದರ್ಯ ಜನ್ಮ ದಿನವಿಂದು. ಸೌಂದರ್ಯ ನಮ್ಮೊಂದಿಗೆ ಇಲ್ಲದೇ ಹೋದರೂ ಅವರನ್ನು ಅಭಿಮಾನಿಗಳು ಸ್ಮರಿಸಿಕೊಂಡಿದ್ದಾರೆ.
2004 ರಲ್ಲಿ ಬೆಂಗಳೂರಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ ಸೌಂದರ್ಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದವರು. ಕನ್ನಡದ ಹೊರತಾಗಿ ತೆಲುಗಿನಲ್ಲಿ ಅವರು ಜನಪ್ರಿಯರಾಗಿದ್ದರು.
ಸೌಂದರ್ಯ ಮತ್ತು ಅಭಿನಯ ಎರಡೂ ಆಕೆಗೆ ಸಿದ್ಧಿಸಿತ್ತು. ಹೀಗಾಗಿ ಎಷ್ಟೋ ಜನರಿಗೆ ಆಕೆ ಇಂದಿಗೂ ಫೇವರಿಟ್ ನಟಿಯಾಗಿಯೇ ಉಳಿದುಕೊಂಡಿದ್ದಾರೆ. ಅವರ ಜನ್ಮದಿನವನ್ನು ಕನ್ನಡ, ತೆಲುಗು ಮಾತ್ರವಲ್ಲದೆ, ದೇಶದ ವಿವಿಧ ಭಾಗದಿಂದ ಅಭಿಮಾನಿಗಳು ಟ್ವಿಟರ್ ಮೂಲಕ ಸ್ಮರಿಸಿಕೊಂಡಿದ್ದಾರೆ.