Publish Date: Sun, 19 Jul 2020 (09:38 IST)
Updated Date: Sun, 19 Jul 2020 (09:40 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ನಿನ್ನೆಗೆ 12 ವರ್ಷಗಳಾಗಿತ್ತು. ಯಶ್ ಮತ್ತು ರಾಧಿಕಾ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ತೆರೆಗೆ ಪರಿಚಯವಾದವರು.
ಯಶ್ ಅಭಿಮಾನಿಗಳು ನಿನ್ನೆಯಿಡೀ ಸಾಮಾಜಿಕ ಜಾಲತಾಣದಲ್ಲಿ 12 ವರ್ಷಗಳ ಸಂಭ್ರಮವನ್ನು ಆಚರಿಸಿದ್ದರು. ಇದರ ಜತೆಗೆ ಯಶ್ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಮೊಗ್ಗಿನ ಮನಸ್ಸಿನ ದಿನಗಳನ್ನು ಮೆಲುಕು ಹಾಕಿದ್ದಾರೆ.
‘ನನ್ನ ಮತ್ತು ರಾಧಿಕಾನ ಜತೆಯಾಗಿ ತೆರೆಗೆ ಪರಿಚಯಿಸಿದ ಸಿನಿಮಾ. ಇದು ಕೇವಲ ನಮ್ಮ ಸಿನಿಮಾದ ಆರಂಭವಾಗಿರಲಿಲ್ಲ ಎಂದು ಗೊತ್ತೇ ಇರಲಿಲ್ಲ’ ಎಂದು ತಮಗೆ ಅವಕಾಶ ಕೊಟ್ಟ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಜತೆಗೆ ರಾಧಿಕಾ ಜತೆಗಿನ ಮೊಗ್ಗಿನ ಮನಸ್ಸು ಶೂಟಿಂಗ್ ದಿನಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.