Select Your Language

Notifications

webdunia
webdunia
webdunia
webdunia

Hubballi: ಹುಬ್ಬಳ್ಳಿ ಬಾಲಕಿ ಮೇಲೆ ಆಗಿದ್ದಂತೇ ಕೇರಳದಲ್ಲೂ ನಡೆದಿತ್ತು ರೇಪ್ ಆಂಡ್ ಮರ್ಡರ್: ಆ ಪಾಪಿಗೆ ಸಿಕ್ಕ ಶಿಕ್ಷೆಯೇನು

Aluva crime

Krishnaveni K

ಬೆಂಗಳೂರು , ಮಂಗಳವಾರ, 15 ಏಪ್ರಿಲ್ 2025 (10:19 IST)
ಬೆಂಗಳೂರು: ಮನೆ ಎದುರು ಆಟವಾಡಿಕೊಂಡಿದ್ದ ಬಡ ದಂಪತಿಯ 5 ವರ್ಷದ ಮಗಳನ್ನು ಬಿಹಾರ ಮೂಲದ ಪಾಪಿ ಪುಸಲಾಯಿಸಿ ಎತ್ತಿಕೊಂಡು ಹೋಗಿ ರೇಪ್ ಆಂಡ್ ಮರ್ಡರ್ ಮಾಡಿದ ಪ್ರಕರಣ ಜನರಿಗೆ ಆಘಾತ ನೀಡಿದೆ. ಇಂತಹದ್ದೇ ಪ್ರಕರಣ ಕೇರಳದಲ್ಲೂ ಎರಡು ವರ್ಷಗಳ ಹಿಂದೆ ನಡೆದಿತ್ತು.

ಕೇರಳದ ಆಲುವಾದಲ್ಲಿ ಬಡ ದಂಪತಿಯ ಐದು ವರ್ಷದ ಮಗಳು ಮನೆ ಎದುರು ಆಟವಾಡಿಕೊಂಡಿದ್ದಳು. ಆಕೆಯನ್ನು ಬಿಹಾರ ಮೂಲದ 28 ವರ್ಷದ ಕಾಮುಕ ಅಶ್ಫಾಕ್ ಅಲಾಮ್ ಪುಸಲಾಯಿಸಿ ಜೊತೆಗೆ ಕರೆದುಕೊಂಡು ಹೋಗಿದ್ದ. ಬಳಿಕ ಆಲುವಾ ಮಾರ್ಕೆಟ್ ಬಳಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ. ಈ ಭೀಕರ ಹತ್ಯೆ ಕೇರಳದ ಜನರನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು.

ಕೃತ್ಯ ನಡೆದ ಒಂದು ದಿನದ ಬಳಿಕ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದ. ಮಾದಕ ದ್ರವ್ಯದ ವ್ಯಸನಿಯಾಗಿದ್ದ ಆರೋಪಿ ಅದೇ ಮತ್ತಿನಲ್ಲಿ ಕೃತ್ಯವೆಸಗಿದ್ದ ಎನ್ನಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸೆಷನ್ಸ್ ಕೋರ್ಟ್ ಆರೋಪಿಯ ವಿಚಾರಣೆ ನಡೆಸಿತ್ತು.

ಆತನ ವಿರುದ್ಧ ಅಪಹರಣ, ಅತ್ಯಾಚಾರ, ಹಿಂಸೆ, ಸಾಕ್ಷ್ಯ ನಾಶ ಸೇರಿದಂತೆ ಸುಮಾರು 13 ಕೇಸ್ ಗಳನ್ನು ದಾಖಲಿಸಲಾಗಿತ್ತು. ವಿಚಾರಣೆ ನಡೆದು 2023 ರಲ್ಲಿ ಜಿಲ್ಲಾ ಕೋರ್ಟ್ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು.ಅದೂ ಮಕ್ಕಳ ದಿನಾಚರಣೆ ದಿನವೇ ಆರೋಪಿಗೆ ಶಿಕ್ಷೆ ಘೋಷಣೆಯಾಗಿತ್ತು. ಇದೀಗ ಹುಬ್ಬಳ್ಳಿಯಲ್ಲಿ ನಡೆದ ಘಟನೆಯೂ ಅದನ್ನೇ ನೆನಪಿಸುವಂತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Hubballi: ಲೇಡಿ ಸಿಂಗಂ ಪಿಎಸ್ ಐ ಅನ್ನಪೂರ್ಣ ಆಸ್ಪತ್ರೆಯಲ್ಲೇ ಮಾಡಿದ್ದ ಶಪಥವೇನು ನೋಡಿ