ಹುಬ್ಬಳ್ಳಿ: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ದುರುಳನನ್ನು ಎನ್ ಕೌಂಟರ್ ಮಾಡಿದ ಲೇಡಿ ಸಿಂಗಂ ಪಿಎಸ್ಐ ಅನ್ನಪೂರ್ಣ ಆಸ್ಪತ್ರೆಯಲ್ಲೇ ಶಪಥವೊಂದನ್ನು ಮಾಡಿದ್ದರಂತೆ. ಅದೇನೆಂದು ಇಲ್ಲಿ ನೋಡಿ ವಿವರ.
ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ 5 ವರ್ಷದ ಹೆಣ್ಣು ಮಗುವಿನ ರೇಪ್ ಆಂಡ್ ಮರ್ಡರ್ ಕೇಸ್ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಕಾಮುಕ ರಿತೇಶ್ ಕುಮಾರ್ ನನ್ನು ಪಿಎಸ್ಐ ಅನ್ನಪೂರ್ಣ ನೇತೃತ್ವದ ತಂಡ ಹಿಡಿದು ಕರೆದುಕೊಂಡು ಬರುವಾಗ ಆತ ಪೊಲೀಸರ ಮೇಲೆ ದಾಳಿ ಮಾಡಿದಾಗ ಎನ್ ಕೌಂಟರ್ ಮಾಡಲಾಗಿತ್ತು. ಪಿಎಸ್ಐ ಅನ್ನಪೂರ್ಣ ಕಾರ್ಯಕ್ಕೆ ಎಲ್ಲರೂ ಶಹಬ್ಬಾಶ್ ಗಿರಿ ಕೊಡುತ್ತಿದ್ದಾರೆ.
ಆದರೆ ಇದಕ್ಕೆ ಮೊದಲು ಅವರು ಶಪಥವೊಂದನ್ನು ಮಾಡಿದ್ದರಂತೆ. ಬಾಲಕಿಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ನೋಡಿದ್ದ ಅನ್ನಪೂರ್ಣಗೆ ಕರುಳು ಕಿತ್ತು ಬಂದಿತ್ತು. ಬಾಲಕಿಯ ಅವಸ್ಥೆ ನೋಡಿ ಈ ಸ್ಥಿತಿಗೆ ಕಾರಣವಾದ ಆ ಕಾಮುಕನನ್ನು ಹೆಡೆಮುರಿ ಕಟ್ಟುವುದಾಗಿ ಶಪಥ ಮಾಡಿ ತೆರಳಿದ್ದರಂತೆ. ಅದರಂತೆ ಆತನನ್ನು ಬಂಧಿಸಿದ್ದರು. ಆದರೆ ಕರೆತರುವಾಗ ಆತ ತಮ್ಮ ಮೇಲೆ ದಾಳಿ ಮಾಡಿದ್ದಕ್ಕೆ ಬೇರೆ ವಿಧಿಯಿಲ್ಲದೇ ಎನ್ ಕೌಂಟರ್ ಮಾಡಬೇಕಾಗಿ ಬಂದಿದೆ.