Select Your Language

Notifications

webdunia
webdunia
webdunia
webdunia

Hubballi: ಐದು ವರ್ಷ ಬಾಲಕಿ ಮೇಲೆ ಪೈಶಾಚಿಕ ಕೃತ್ಯವೆಸಗಿದ ಪಾಪಿಯ ಕ್ರೌರ್ಯ ಬಯಲು, ಕೇಳಿದ್ರೆ ಶಾಕ್ ಆಗ್ತೀರಿ

Hubballi

Krishnaveni K

ಹುಬ್ಬಳ್ಳಿ , ಸೋಮವಾರ, 14 ಏಪ್ರಿಲ್ 2025 (20:33 IST)
ಹುಬ್ಬಳ್ಳಿ: ಐದು ವರ್ಷ ಬಾಲಕಿ ಮೇಲೆ ಪೈಶಾಚಿಕ ಕೃತ್ಯವೆಸಗಿದ ಪಾಪಿ ರಿತೇಶ್ ಕುಮಾರ್ ಕ್ರೌರ್ಯ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಿ. ಇದೀಗ ಬಾಲಕಿಯ ಮರಣೋತ್ತರ ಪರೀಕ್ಷೆ ವರದಿಗಳು ಎಲ್ಲವನ್ನೂ ಬಯಲು ಮಾಡಿದೆ.

ಇಂದು ಮರಣೋತ್ತರ ಪರೀಕ್ಷೆ ಬಳಿಕ ಬಾಲಕಿಯ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಅತ್ತ ಪೊಲೀಸರಿಂದ ಎನ್ ಕೌಂಟರ್ ಗೀಡಾದ ಆರೋಪಿಯ ಮೃತದೇಹವನ್ನೂ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಈ ವೇಳೆ ಸಾಕಷ್ಟು ವಿಚಾರಗಳು ಹೊರಬಿದ್ದಿವೆ.

ಬಾಲಕಿಯ ಮೇಲೆ ರಿತೇಶ್ ಅತ್ಯಾಚಾರವೆಸಗಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿದೆ. ಬಾಲಕಿ ಕಿರುಚಿಕೊಂಡಿದ್ದರಿಂದ ಸ್ಥಳೀಯರು ಅಲ್ಲಿಗೆ ಬಂದಿದ್ದಾರೆ. ಸ್ಥಳೀಯರು ಬರುತ್ತಿರುವುದನ್ನು ನೋಡಿ ಆರೋಪಿ ಬಾಲಕಿಯ ಕತ್ತು ಹಿಸುಕಿ ಕೊಲೆಗೈದಿದ್ದಾನೆ.

ಇನ್ನು ಪಾಪಿ ರಿತೇಶ್ ಕುಮಾರ್ ಮರಣೋತ್ತರ ಪರೀಕ್ಷೆ ವೇಳೆ ಶಾಕಿಂಗ್ ವಿಚಾರ ಬಯಲಾಗಿದೆ. ಆರೋಪಿ ರಿತೇಶ್ ಸೈಕೋಪಾತ್ ರೀತಿ ವರ್ತಿಸಿರುವುದು ಖಚಿತವಾಗಿದೆ. ಆತನ ಒಳ ಉಡುಪಿನಲ್ಲಿ ಬಾಲಕಿಯ ಲೆಗ್ಗಿನ್ಸ್ ಪತ್ತೆಯಾಗಿದೆ. ಹೀಗಾಗಿ ಆತನ ಯಾವ ಮನಸ್ಥಿತಿಯವನು ಎಂದು ತಿಳಿದುಬರುತ್ತದೆ. ಅಧಿಕೃತವಾಗಿ ಮರಣೋತ್ತರ ವರದಿ ಇನ್ನಷ್ಟೇ ಬರಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Hubballi ರೇಪ್ ಆಂಡ್ ಮರ್ಡರ್ ಕೇಸ್: ಪಂಚಭೂತಗಳಲ್ಲಿ ಲೀನವಾದ ಕಂದಮ್ಮ, ಅನಾಥವಾದ ಪಾಪಿಯ ಶವ