Select Your Language

Notifications

webdunia
webdunia
webdunia
webdunia

ವಧುವಿನ ಸೆಲ್ಫಿ ಅವಾಂತರ: ಮದುವೆಯಲ್ಲಿ ವರನೇ ಬದಲಾದ ಹೇಗೆ ಗೊತ್ತಾ?

ವಧುವಿನ ಸೆಲ್ಫಿ ಅವಾಂತರ: ಮದುವೆಯಲ್ಲಿ ವರನೇ ಬದಲಾದ ಹೇಗೆ ಗೊತ್ತಾ?
ಹಾಸನ , ಶುಕ್ರವಾರ, 30 ನವೆಂಬರ್ 2018 (16:25 IST)
ಬೆಳಗ್ಗೆ ನಡೆಯಬೇಕಿದ್ದ ಮದುವೆಗೂ ಮುನ್ನ ವರನ ಮೊಬೈಲ್ ಗೆ ವಧುವಿನ ಫೋಟೋಗಳು ಬಂದು ಇನ್ನಿಲ್ಲದ ಅವಾಂತರ ಸೃಷ್ಠಿಸಿದ ಘಟನೆ ನಡೆದಿದೆ.  

ಮದುವೆ ಮನೆಯಲ್ಲಿ ವರನ ಮೊಬೈಲ್‌ ಗೆ ಬಂದ ಮೂರು ಫೋಟೋಗಳನ್ನು ನೋಡಿ ಮದುವೆ ಬೇಡವೆಂದು ವರ ಹಠ ಹಿಡಿದ ಘಟನೆ ನಡೆದಿದೆ.

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಘಟನೆ ನಡೆದಿದೆ. ನಿಗದಿಯಾಗಿದ್ದ ಶೃತಿ ಹಾಗು ತಾರೇಶ್ ವಿವಾಹದಲ್ಲಿ ಈ ಘಟನೆ ನಡೆದಿದೆ. ಮದುವೆ ಛತ್ರಕ್ಕೆ ಬಂದು ಶಾಸ್ತ್ರ ಸಂಪ್ರದಾಯ ನೆರವೇರಿಸಿದ್ದ ವಧು ವರರ ಸಂಬಂಧಿಕರು ಆಮೇಲೆ ಹೈರಾಣಾಗುವಂತಾಗಿದೆ.

ಮುಂಜಾನೆ ತಾರೇಶ್ ಮೊಬೈಲ್ ಗೆ ಅಪರಿಚಿತನೊಬ್ಬ ಮೂರು ಪೋಟೋಗಳನ್ನು ಕಳಿಸಿದ್ದಾನೆ. ತಾಳಿ ಕಟ್ಟೋ ಎರಡು ಗಂಟೆ ಮುಂಚೆ ವರ ಮದುವೆ ಬೇಡೆ ಎಂದಿದ್ದಾನೆ. ವಧುವಿಗೆ ಬೇರೊಬ್ಬರ ಜೊತೆ ಸಂಬಂಧ ಇರೋದಾಗಿ ವರನ ಆರೋಪವಾಗಿದೆ.
ವಿಷಯ ತಿಳಿದು ಮದುವೆ ಮಂಟಪಕ್ಕೆ ಬಂದ ಫೋಟೋದಲ್ಲಿದ್ದ ಯುವಕ  ಅಭಿಲಾಶ್, ತನ್ನಿಂದ ಯುವತಿ ಮದುವೆ ನಿಲ್ಲೋದು ಬೇಡೆಂದು ಶೃತಿಯನ್ನ ತಾನೇ ವರಿಸಿದ್ದಾನೆ.

ಪೊಲೀಸರ ಸಮ್ಮುಖದಲ್ಲಿ ಕಲಹ ಸುಖಾಂತ್ಯ ಕಂಡಿತು. ಅಭಿಲಾಶ್ ಅಂಗಡಿಯಲ್ಲಿ ವಧು ಶೃತಿ ಕೆಲಸ ಮಾಡುತ್ತಿದ್ದಳು.  
ಈ ವೇಳೆ ತನ್ನ ಅಂಗಡಿ ಮಾಲೀಕನ ಮನೆ ಗೃಹ ಪ್ರವೇಶಕ್ಕೆ ಹೋಗಿದ್ದಾಗ ಅವರೊಟ್ಟಿಗೆ ಫೋಟೋ ತೆಗೆಸಿಕೊಂಡಿದ್ದಳು. ಒಂದು ಸೆಲ್ಫಿ, ಒಂದು ಕಾರಿನಲ್ಲಿ ಕುಳಿತ ಫೋಟೋ ಮತ್ತೊಂದು ಗೃಹ ಪ್ರವೇಶದಲ್ಲಿ ಜೊತೆಗಿರೋ ಫೋಟೋಗಳನ್ನು ನೋಡಿ ವಧು ಬಗ್ಗೆ ವರ ಅಪಸ್ವರ ಎತ್ತಿ ಮದುವೆ ಬೇಡ ಎಂದ. ಆಗ ಅಂಗಡಿ ಮಾಲೀಕನೇ ಶೃತಿಯನ್ನು ಮದುವೆಯಾಗಿದ್ದಾನೆ.

 

 

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯುತ್ ಕಂಬಕ್ಕೆ ಟಾಟಾ ಯೇಸ್ ಢಿಕ್ಕಿ: ಆಮೇಲೆ ಏನಾಯ್ತು ಗೊತ್ತಾ?