Publish Date: Fri, 30 Nov 2018 (14:03 IST)
Updated Date: Fri, 30 Nov 2018 (14:05 IST)
ವಿದ್ಯುತ್ ಕಂಬಕ್ಕೆ ಟಾಟಾ ಯೇಸ್ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಘಟನೆ ಪರಿಣಾಮ ವಿದ್ಯುತ್ ಕಂಬವು ರಸ್ತೆಗೆ ಉರುಳಿದ್ದು, ಭಾರಿ ಅನಾಹುತ ತಪ್ಪಿದೆ. ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ಮುಂಜಾನೆ ಟಾಟಾ ಯೇಸ್ ವಾಹನ ವೇಗವಾಗಿ ಬಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ.
ವಿದ್ಯುತ್ ಕಂಬವು ಸಂಪೂರ್ಣವಾಗಿ ಮುರಿದು ರಸ್ತೆಗೆ ಉರುಳಿದೆ. ಆ ಸಂದರ್ಭದಲ್ಲಿ ಪಾದಚಾರಿಗಳ ಓಡಾಟ ಕಡಿಮೆ ಇದ್ದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ಇನ್ನು ಈ ರಸ್ತೆಯಲ್ಲಿ ಪ್ರತಿನಿತ್ಯ ರೈಲಿನ ಮೂಲಕ ಕೆಲಸಗಳಿಗೆ ಹೋಗುವಂತ ಪ್ರಯಾಣಿಕರು ಸಾಕಷ್ಟು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಯಿತು.
ನಂತರ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಆನೇಕಲ್ ಬೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆಗೆ ಉರುಳಿದ ವಿದ್ಯುತ್ ಕಂಬವನ್ನು ತೆರವುಗೊಳಿಸಿದ್ದಾರೆ.