Publish Date: Thu, 29 Nov 2018 (14:39 IST)
Updated Date: Thu, 29 Nov 2018 (14:45 IST)
ಮದುವೆ ಹಿಂದಿನ ದಿನವೇ ಮದುವೆಯಾಗಬೇಕಿದ್ದ ವರ ಪರಾರಿಯಾದ ಘಟನೆ ನಡೆದಿದೆ.
ಸಕ್ಕರೆನಾಡು ಮಂಡ್ಯಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಮದುವೆ ಹಿಂದಿನ ದಿನವೇ ಪ್ರೇಯಸಿ ಜೊತೆ ವರ ಪರಾರಿಯಾದ ಘಟನೆ ನಡೆದಿದೆ. ಮದ್ದೂರು ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ
ಶಿವನಂಜೇಗೌಡರ ಪುತ್ರ ಅಭಿಜಿತ್ ಗೌಡ ತನ್ನ ಪ್ರೇಯಸಿಯೊಂದಿಗೆ ಪರಾರಿಯಾದ ವರನಾಗಿದ್ದಾನೆ.
ಮಂಡ್ಯ ನಗರದದ ಬಿಜಿಎಸ್ ಸಮುದಾಯ ಭವನದಲ್ಲಿ ಅಭಿಜಿತ್ ಮದುವೆ ನಡೆಯಬೇಕಿತ್ತು. ಆದರೆ ಅಭಿಜಿತ್ ತನ್ನದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ, ನಿನ್ನೆ ರಾತ್ರಿ ಆ ಯುವತಿಯೊಂದಿಗೆ ಪರಾರಿಯಾಗಿದ್ದಾನೆ.
ಇನ್ನೂ ಅಭಿಜಿತ್ ಜತೆಗೆ ವಿವಾಹವಾಗಬೇಕಿದ್ದ ಶ್ರೀರಂಗಪಟ್ಟಣ ತಾಲೂಕಿನ ಯುವತಿಯ ಕುಟುಂಬ ಕಂಗಾಲಾಗಿದ್ದು, ಈ ಸಂಬಂಧ ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.