Publish Date: Wed, 28 Nov 2018 (13:43 IST)
Updated Date: Wed, 28 Nov 2018 (13:52 IST)
ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನ ಬಂಧನ ಮಾಡಲಾಗಿದೆ.
ಚಿಂತಾಮಣಿ ನಗರದ ಅಗ್ರಹಾರ ನಿವಾಸಿ 16 ವರ್ಷದ ಬಾಲಕಿಯ ಮೇಲೆ ಸತೀಶ್ (23) ಅತ್ಯಾಚಾರ ಎಸಗಿದ ವ್ಯಕ್ತಿ ಯಾಗಿದ್ದಾನೆ.
ಚಿಂತಾಮಣಿ ನಗರದ ಅಗ್ರಹಾರ ಮೂಲದ ಸತೀಶ್ ಬಂಧನಕ್ಕೊಳಗಾದ ವ್ಯಕ್ತಿಯಾಗಿದ್ದಾನೆ.
ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿದ ಕಾಮುಕ ಒಂದುವರೆ ತಿಂಗಳು ಪಿಂಡಪಾಪಾನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತೆಯನ್ನು ಇರಿಸಿ ಅತ್ಯಾಚಾರ ನಡೆಸಿದ್ದಾನೆ. ನೊಂದ ಪೋಷಕರಿಂದ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪೋಸ್ಕೋ ಕಾಯಿದೆಯಡಿ ದೂರು ದಾಖಲಿಸಿಕೊಂಡ ಪೊಲೀಸರು, ಖಚಿತ ಮಾಹಿತಿ ಮೇಲೆ ಆರೋಪಿ ಸತೀಶನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.