Publish Date: Thu, 29 Nov 2018 (14:49 IST)
Updated Date: Thu, 29 Nov 2018 (14:51 IST)
ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಆತ ಮಾಡಬಾರದ್ದನ್ನು ಮಾಡುತ್ತಿದ್ದ.
ಮದುವೆ ಮಾಡಿಸುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಂಧನ ಮಾಡಲಾಗಿದೆ. ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಮಹಿಳೆಯರಿಗೆ ವಂಚಿಸುತ್ತಿದ್ದ ವ್ಯಕ್ತಿ ಬಂಧನವಾಗಿದೆ.
ವರನನ್ನು ಹುಡುಕಿ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿ ಮಹಿಳೆಯರಿಂದ ಹಣ, ಬಂಗಾರ ದೋಚಿದ ವ್ಯಕ್ತಿ ಅಂದರ್ ಆಗಿದ್ದಾನೆ.
ಮಂಡ್ಯ ಮೂಲದ ರಾಮಕೃಷ್ಣ(52)ಬಂಧನವಾಗಿರುವ ಖದೀಮನಾಗಿದ್ದಾನೆ. ಸರ್ಕಾರಿ ನೌಕರಿಯ ಮಹಿಳೆಯರೇ ಇವನ ಟಾರ್ಗೇಟ್ ಆಗಿದ್ದರು. ಎರಡನೇ ಮದುವೆ ಮಾಡಿಸುವ ನೆಪದಲ್ಲಿ ಹತ್ತಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಿರಾತಕ ಈಗ ಕಂಬಿ ಹಿಂದೆ ಬಿದ್ದಿದ್ದಾನೆ.
ಚಿಕ್ಕಮಗಳೂರು ಮೂಲದ ಶಿಕ್ಷಕಿಗೆ ಮೋಸ ಮಾಡಿ ಸಿಕ್ಕಿಬಿದ್ದ ರಾಮಕೃಷ್ಣನ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.