Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಎರಡನೇ ಕೇಸ್ ಪತ್ತೆ: ಮಗುವಿನ ವಿವರ ಇಲ್ಲಿದೆ

Corona

Krishnaveni K

ಬೆಂಗಳೂರು , ಸೋಮವಾರ, 6 ಜನವರಿ 2025 (13:47 IST)
ಬೆಂಗಳೂರು: ಆತಂಕಕಾರೀ ಎಚ್ ಎಂಪಿವಿ ವೈರಸ್ ನ ಎರಡನೇ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. 8 ತಿಂಗಳ ಮಗುವಿನ ಬಳಿಕ ಇನ್ನೊಂದು 3 ತಿಂಗಳ ಮಗುವಿನಲ್ಲೂ ಈ ವೈರಸ್ ಇರುವುದು ಖಚಿತವಾಗಿದೆ.

3 ತಿಂಗಳ ಹೆಣ್ಣು ಮಗುವಿನಲ್ಲಿ ಎಚ್ ಎಂಪಿವಿ ವೈರಸ್ ಪತ್ತೆಯಾಗಿದ್ದು ಈ ಮಗುವಿಗೂ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎನ್ನುವುದು ಖಚಿತವಾಗಿದೆ. ಈಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯಕ್ಕೆ ಮಗು ಚೇತರಿಸಿಕೊಂಡಿದೆ. ಹೀಗಾಗಿ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.

ಇನ್ನೊಂದು 8 ತಿಂಗಳ ಮಗುವಿಗೂ ಎಚ್ ಎಂಪಿವಿ ವೈರಸ್ ಖಚಿತಪಟ್ಟಿತ್ತು. ಆಕೆಯೂ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಕೆಯ ಹಾದಿಯಲ್ಲಿದ್ದಾಳೆ ಎಂದು ತಿಳಿದುಬಂದಿದೆ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ವಿಶೇಷವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳು, ವಯೋವೃದ್ಧರಿಗೆ ಈ ಸೋಂಕು ತಗುಲುವ ಅಪಾಯವಿರುವ ಕಾರಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ಮಗುವಿಗೆ ವೈರಸ್ ಬಂದಿರುವ ವರದಿಗಳೆಲ್ಲಾ ಸುಳ್ಳಾ: ಮಗುವಿನ ತಂದೆ ಹೇಳಿದ್ದೇನು