ಬೆಂಗಳೂರು: ಬೆಂಗಳೂರಿನಲ್ಲಿ ಎಚ್ ಎಂಪಿ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ ಮಾಡಲಾಗಿದ್ದು, ವಿಶೇಷವಾಗಿ ಮಕ್ಕಳು, ವೃದ್ಧರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಎಚ್ ಎಂಪಿವಿ ವೈರಸ್ ಬಂದಿರುವುದು ನಿಜ ಎಂದು ಆರೋಗ್ಯ ಇಲಾಖೆ ಖಚಿತಪಡಿಸಿದ್ದು ಬೇರೆ ಬೇರೆ ಕಡೆ ಪರೀಕ್ಷೆಗೆ ರವಾನಿಸಲಾಗಿದೆ ಎಂದಿದೆ. ಇನ್ನು ಎಚ್ ಎಂಪಿವಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಗೈಡ್ ಲೈನ್ಸ್ ನಲ್ಲಿ ಏನಿದೆ ಇಲ್ಲಿ ನೋಡಿ.
ಸೋಂಕಿನ ಲಕ್ಷಣಗಳು ಮತ್ತು ಗೈಡ್ ಲೈನ್ಸ್
-
ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ವಿಶೇಷವಾಗಿ ಮಕ್ಕಳಿಗೆ ಮತ್ತು ವೃದ್ಧರಿಗೆ ಹೆಚ್ಚು ಸೋಂಕು ತಗುಲುತ್ತದೆ.
-
ಸೋಂಕು ದೇಹಕ್ಕೆ ತಗುಲಿದ ಬಳಿಕ 3-4 ದಿನಗಳಲ್ಲಿ ಲಕ್ಷಣಗಳು ಕಂಡುಬರುತ್ತವೆ. ಈ ದಿನಗಳೊಳಗಾಗಿ ಉಸಿರಾಟದ ಸಮಸ್ಯೆ ಕಂಡುಬರುತ್ತದೆ. ಜ್ವರ, ಕೆಮ್ಮು ಕಂಡುಬರುತ್ತದೆ.
-
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವಂತಿಲ್ಲ
-
ಒಮ್ಮೆ ಬಳಸಿದ ಕರ್ಚೀಫ್ ಮತ್ತೊಮ್ಮೆ ಬಳಸಬೇಡಿ
-
ಕೆಮ್ಮುವಾಗ, ಸೀನುವಾಗ ಕರ್ಚೀಫ್ ಅಥವಾ ಟಿಶ್ಯೂ ಬಳಸಬೇಕು
-
ಅನಾರೋಗ್ಯ ಪೀಡಿತರಿಂದ ಅಂತರ ಕಾಯ್ದುಕೊಳ್ಳಬೇಕು
-
ಕಣ್ಣು, ಮೂಗು, ಬಾಯಿ ಪದೇ ಪದೇ ಮುಟ್ಟಿಕೊಳ್ಳಬಾರದು
-
ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಇತರರಿಂದ ಅಂತರ ಕಾಯ್ದುಕೊಳ್ಳಬೇಕು.