ಬೆಂಗಳೂರು: ಚೀನಾ ಮೂಲದ ಮತ್ತೊಂದು ಆತಂಕಕಾರೀ ವೈರಸ್ HMPV ಈಗ ಭಾರತಕ್ಕೂ ಕಾಲಿಟ್ಟಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಮಗುವೊಂದರಲ್ಲಿ ಪತ್ತೆಯಾಗಿದೆ. ಇದು ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ 8 ತಿಂಗಳ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಜ್ವರದಿಂದ ಬಳಲುತ್ತಿದ್ದ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ರಕ್ತ ಪರೀಕ್ಷೆ ನಡೆಸಿದಾಗ ಎಚ್ ಎಂಪಿವಿ ಸೋಂಕು ಇರುವುದು ಖಚಿತವಾಗಿದೆ. ಆದರೆ ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಆದರೆ ಇದು ಮ್ಯುಟೇಷನ್ ಆಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಚೀನಾದಲ್ಲಿ ಈ ವೈರಸ್ ಯಾವ ರೀತಿ ಇದೆ ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ಇಲ್ಲಿ ಮಗುವಿನಲ್ಲಿ ಪತ್ತೆಯಾಗಿರುವ ವೈರಸ್ ಕೂಡಾ ಚೀನಾ ತಳಿಯಾ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಈಗ ಸೋಂಕು ಪತ್ತೆಯಾಗಿರುವ ಮಗುವಿಗೆ ಮತ್ತು ಪೋಷಕರಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಹೀಗಾಗಿ ಚೀನಾ ತಳಿಯಾಗಿರದು ಎಂಬ ಭರವಸೆಯಿದೆ. ಹಾಗಿದ್ದರೂ ಎಚ್ಚರವಾಗಿರುವುದು ಉತ್ತಮ. ಹಾಗೆಂದು ಆತಂಪಡುವ ಅಗತ್ಯವೂ ಇಲ್ಲ ಎಂದು ಆರೋಗ್ಯ ಇಲಾಖೆ ಹೇಳಿದೆ.
ಸೋಂಕಿನ ಲಕ್ಷಣಗಳೇನು?
HMPV ವೈರಸ್ ಕೂಡಾ ಹೆಚ್ಚು ಕಡಿಮೆ ಕೊರೋನಾ ಸೋಂಕನ್ನೇ ಹೋಲುತ್ತದೆ. ಕೊರೋನಾದಂತೇ ರೋಗ ನಿರೋಧಕ ಶಕ್ತಿ ದುರ್ಬಲರಾಗಿರುವವರಿಗೇ ಈ ಸೋಂಕು ತಗುಲುತ್ತದೆ. ಮುಖ್ಯವಾಗಿ ಉಸಿರಾಟದ ಸೋಂಕು ಇದಾಗಿದೆ. HMPV ವೈರಸ್ ತಡೆಗೂ ಸದ್ಯಕ್ಕೆ ಯಾವುದೇ ಲಸಿಕೆ ಇಲ್ಲ. ಹೀಗಾಗಿ ನಮ್ಮಿಂದ ಆದಷ್ಟು ಎಚ್ಚರಿಕೆ ಕೈಗೊಳ್ಳುವುದೇ ಇದನ್ನು ತಡೆಯಲು ಇರುವ ಮಾರ್ಗವಾಗಿದೆ.