ನವದೆಹಲಿ: ಚೀನಾದಲ್ಲಿ ಸ್ಪೋಟಗೊಂಡಿರುವ HMPV ವೈರಸ್ ಜಪಾನ್ ಗೂ ಹಬ್ಬಿದ್ದು ಭಾರತಕ್ಕೆ ಬಂದಿದೆಯಾ ಎನ್ನುವ ಆತಂಕಗಳಿಗೆ ಕೇಂದ್ರ ಸರ್ಕಾರ ಮಹತ್ವದ ಸುದ್ದಿ ನೀಡಿದೆ.
ಚೀನಾದಲ್ಲಿ ಭಾರೀ ಪ್ರಮಾಣದಲ್ಲಿ HMPV ಸೋಂಕು ಹರಡಿದ್ದು ಆಸ್ಪತ್ರೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಂತಿದ್ದಾರೆ. ಈ ಸೋಂಕು ಉಸಿರಾಟದ ಸೋಂಕು ವರ್ಗಕ್ಕೆ ಸೇರಿದ ರೋಗವಾಗಿದ್ದು, ಒಂದು ರೀತಿಯಲ್ಲಿ ಕೊವಿಡ್ ರೀತಿಯಲ್ಲೇ ಇದೂ ಕೂಡಾ ಸಾಕಷ್ಟು ಜನಕ್ಕೆ ಅಪಾಯ ತಂದೊಡ್ಡುವ ಲಕ್ಷಣಗಳು ಕಾಣಿಸುತ್ತಿದೆ.
ಈ ಸೋಂಕು ಶೀತ, ಕಫದಂತಹ ಲಕ್ಷಣಗಳನ್ನು ಹೊಂದಿದ್ದು ವಿಶೇಷವಾಗಿ ಮಕ್ಕಳು ಮತ್ತು ವೃದ್ಧರಲ್ಲಿ ಕಾಣಿಸಿಕೊಳ್ಳುತ್ತಿದೆ. ವಿಶೇಷವಾಗಿ ಕಡಿಮೆ ನಿರೋಧ ಶಕ್ತಿ ಇರುವವರಿಗೆ ಸೋಂಕು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಈಗಾಗಲೇ ಜಪಾನ್ ನಲ್ಲಿ ಕೆಲವು ಪ್ರಕರಣಗಳು ಕಂಡುಬಂದಿದೆ. ಹೀಗಾಗಿ ಭಾರತದಲ್ಲೂ ಆತಂಕ ಮನೆ ಮಾಡಿದೆ.
ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ ಇದುವರೆಗೆ ಭಾರತದಲ್ಲಿ ಸೋಂಕು ಕಂಡುಬಂದಿಲ್ಲ. ಆತಂಕ ಬೇಡ ಎಂದು ಅಭಯ ನೀಡಿದೆ. ಸದ್ಯಕ್ಕೆ ಉಸಿರಾಟ ಸಂಬಂಧೀ ಸಮಸ್ಯೆಗಳನ್ನು ಕಂಡುಬಂದಲ್ಲಿ ನಿಗಾ ವಹಿಸಲಾಗುತ್ತಿದೆ. ಒಂದು ವೇಳೆ ಭಾರತದಲ್ಲಿ ಪ್ರಕರಣ ಕಂಡುಬಂದರೂ ಅದನ್ನು ನಿಭಾಯಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಆರೋಗ್ಯ ಸೇವೆಗಳ ಮಹಾನಿರ್ದೇಶಕ ಡಾ. ಅತುಲ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಚೀನಾದಲ್ಲಿ ಚಳಿಗಾಲದ ಸಂದರ್ಭದಲ್ಲಿ ಒಂದಲ್ಲಾ ಒಂದು ವೈರಸ್ ಆತಂಕ ಸೃಷ್ಟಿಸುತ್ತಲೇ ಇದೆ. ಅದರಂತೇ ಇದೂ ಕೂಡಾ ಒಂದಾಗಿದೆ. ಸದ್ಯಕ್ಕೆ ಆತಂಕ ಬೇಡ ಎಂದಿದ್ದಾರೆ.