Select Your Language

Notifications

webdunia
webdunia
webdunia
webdunia

ವಾಲ್ಮೀಕಿ, ಮುಡಾ ಬಹುಕೋಟಿ ಹಗರಣದ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಮತ್ತೊಂದು ಅವ್ಯವಹಾರ: ಬಿವೈವಿ

ವಾಲ್ಮೀಕಿ, ಮುಡಾ ಬಹುಕೋಟಿ ಹಗರಣದ ಬೆನ್ನಲ್ಲೇ ಕಾಂಗ್ರೆಸ್‌ನಿಂದ ಮತ್ತೊಂದು ಅವ್ಯವಹಾರ: ಬಿವೈವಿ

Sampriya

ಬೆಂಗಳೂರು , ಭಾನುವಾರ, 5 ಜನವರಿ 2025 (16:44 IST)
ಬೆಂಗಳೂರು: ಜಮೀನು ಹಂಚಿಕೆ ಮಾಡದೆ ಅಂಬೇಡ್ಕೆರ್ ಅಭಿವೃದ್ಧಿ ನಿಗಮದಲ್ಲಿ ನಕಲಿ ಖರೀದಿ ಪತ್ರಗಳನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ₹16.85ಕೋಟಿ ನಷ್ಟವಾಗಿರುವುದು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.

ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಬರೆದುಕೊಂಡಿದ್ದಾರೆ.

ಶೋಷಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ  ಲೂಟಿ, ಮೈಸೂರು ಮುಡಾ ಬಹುಕೋಟಿ ಹಗರಣಗಳು ತನಿಖೆಯ ಹಂತದಲ್ಲಿರುವಾಗಲೇ ಇದೀಗ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿಯೂ 16.85 ಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯೊಂದರಲ್ಲೇ ಈ ಪರಿಯ ಅವ್ಯವಹಾರ ನಡೆದಿದೆ ಎಂದರೆ ಇನ್ನು ರಾಜ್ಯದೆಲ್ಲೆಡೆ ಇರುವ ಜಿಲ್ಲೆಗಳಲ್ಲಿ ಯಾವ ಮಟ್ಟಕ್ಕೆ ಅಕ್ರಮಗಳು ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ದಿನದಿಂದ ದಿನಕ್ಕೆ ನಾಡಿನ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಾ, ಅವ್ಯವಹಾರ, ಭ್ರಷ್ಟಾಚಾರಗಳು ಅಕ್ರಮಗಳ ಮೂಲಕ ದೇಶದ ಅತೀ ಕಡುಭ್ರಷ್ಟ ರಾಜ್ಯವೆಂಬ ಅಪಕೀರ್ತಿ ತರುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ನಿಮ್ನ ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಪದೇ ಪದೇ ಬಯಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ತಂದೆ ಈ ಶತಮಾನದ ನಿಜವಾದ ಕಟ್ಟಪ್ಪ: ಪ್ರಿಯಾಂಕ್‌ ಖರ್ಗೆಗೆ ಆರ್‌ ಅಶೋಕ್‌ ಕೌಂಟರ್‌