Select Your Language

Notifications

webdunia
webdunia
webdunia
webdunia

ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರಿಗೆ ಮೂಗುದಾರ: ಶಿಕ್ಷಣ ಇಲಾಖೆಯ ಖಡಕ್‌ ಆದೇಶದಲ್ಲಿ ಅಂತದ್ದೇನಿದೆ

Head Teachers of Government Schools

Sampriya

ಬೆಂಗಳೂರು , ಗುರುವಾರ, 20 ಫೆಬ್ರವರಿ 2025 (14:31 IST)
Photo Courtesy X
ಬೆಂಗಳೂರು: ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಶಿಕ್ಷಣ ಇಲಾಖೆ ಮುಗುದಾರ ಹಾಕಿದೆ.  ಯಾರಿಗೂ ಮಾಹಿತಿ ನೀಡದೇ ತಮ್ಮ ವೈಯಕ್ತಿಕ ಕೆಲಸ, ಸಭೆ-ಸಮಾರಂಭಗಳಿಗೆ ಹೋಗುತ್ತಿರುವವರಿಗೆ ಇಲಾಖೆ ಬಿಸಿ ಮುಟ್ಟಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಈ ಸಂಬಂಧಆದೇಶ ಹೊರಡಿಸಿದ್ದು, ಶಾಲಾ ಸಮಯದಲ್ಲಿ ಇನ್ನು ಮುಂದೆ ಮುಖ್ಯ ಶಿಕ್ಷಕರು ಸಭೆ, ಸಮಾರಂಭಗಳಿಗೆ ಹೋಗುವಂತಿಲ್ಲ ಎಂದು ಖಡಕ್‌ ಎಚ್ಚರಿಕೆಯನ್ನು ರವಾನಿಸಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯಶಿಕ್ಷಕರು ಶಾಲಾ ಸಮಯದಲ್ಲಿ ಉಪಸ್ಥಿತರಿಲ್ಲದೇ ಸಭೆ ಮತ್ತು ಸಮಾರಂಭಕ್ಕೆ ತೆರಳಿರುವುದಾಗಿ ತಿಳಿದುಬಂದಿದ್ದು, ವಿದ್ಯಾರ್ತಿಗಳ ಗುಣಾತ್ಮಕ ಶಿಕ್ಷಣ ನೀಡುವುದು ಸಾಧ್ಯವಾಗುತ್ತಿರುವುದಿಲ್ಲ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಈ ಪ್ರಯುಕ್ತ ಮುಖ್ಯ ಶಿಕ್ಷಕರು ಇನ್ನು ಮುಂದೆ ಸಭೆ/ ಸಮಾರಂಭಗಳಿಗೆ ತೆರಳುವ ಸಮಯದಲ್ಲಿ ಚಲನ ವಲನದ ಮಾಹಿತಿಯನ್ನು ನಮೂದಿಸಿ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ಸಭಾ ಸೂಚನಾ ಚಿತ್ರವನ್ನು ಲಗತ್ತಿಸುವಂತೆ ಎಲ್ಲ ಮುಖ್ಯಶಿಕ್ಷಕರಿಗೆ ಸೂಚಿಸಲಾಗಿದೆ. ಈ ಆದೇಶವನ್ನು ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ದಿನಾಚರಣೆಗೆ ಗುಡ್‌ ನ್ಯೂಸ್‌: ಗೃಹಿಣಿಯರ ಖಾತೆಗೆ ಜಮೆಯಾಗುವ ಹಣವೆಷ್ಟು ಗೊತ್ತಾ