Select Your Language

Notifications

webdunia
webdunia
webdunia
webdunia

ರಾಜ್ಯ ಸರ್ಕಾರದಿಂದ ಈಗ ಆತ್ಮಹತ್ಯೆ ಭಾಗ್ಯ

R Ashok-Chalavadi Narayanaswamy

Krishnaveni K

ಬೆಂಗಳೂರು , ಬುಧವಾರ, 12 ಫೆಬ್ರವರಿ 2025 (16:46 IST)
ಬೆಂಗಳೂರು: ಪೊಲೀಸ್ ಠಾಣೆಗೆ ನುಗ್ಗಿ ಹಿರಿಯ ಐಪಿಎಸ್ ಅಧಿಕಾರಿಗಳ ಮೇಲೆ ಹಲ್ಲೆ, ಪೊಲೀಸರ ಮೇಲೆ ಆಕ್ರಮಣ ಆಗುತ್ತಿದೆ ಎಂದರೆ ನಾವು ಯಾವ ಹಂತ ಮುಟ್ಟುತ್ತಿದ್ದೇವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಅತ್ಯಂತ ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಉದಯಗಿರಿಯ ಘಟನೆಯನ್ನು ಬಿಜೆಪಿ- ಕಾಂಗ್ರೆಸ್ ಎಂಬ ದೃಷ್ಟಿಯಿಂದ ನೋಡದೆ, ಹಿಂದೂ- ಮುಸ್ಲಿಂ ಎಂಬ ದೃಷ್ಟಿಯಿಂದ ನೋಡಲಾರದೆ, ಕರ್ನಾಟಕದಲ್ಲಿ ಆಂತರಿಕ ಸುರಕ್ಷತೆ ಯಾವ ಹಂತಕ್ಕೆ ತಲುಪಿದೆ ಎಂಬ ದೃಷ್ಟಿಯಿಂದ ನೋಡಬೇಕಿದೆ ಎಂದು ವಿಶ್ಲೇಷಿಸಿದರು.

ರಕ್ಷಣಾ ವ್ಯವಸ್ಥೆ ಬಗ್ಗೆ ಜನಸಾಮಾನ್ಯರಿಗೆ ಸಂಶಯ ಮೂಡಿದರೆ, ಈ ರಾಜ್ಯದಲ್ಲಿ ಜನಸಾಮಾನ್ಯ ಯಾವ ರೀತಿಯ ಭರವಸೆಯ ಬದುಕನ್ನು ಕಟ್ಟಿಕೊಳ್ಳಬಲ್ಲ ಎಂಬ ಆತಂಕದಿಂದ ಉದಯಗಿರಿಯ ಘಟನೆಯನ್ನು ನೋಡಬೇಕಿದೆ ಎಂದರಲ್ಲದೆ, ಉದಯಗಿರಿ ಘಟನೆ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಕೇಳಿದರು.

ಈ ಶಕ್ತಿಗಳು ಇದೇ ವೇಗದಲ್ಲಿ ಬೆಳೆದರೆ ಈ ರಾಷ್ಟ್ರದ ಆಂತರಿಕ ಸುರಕ್ಷತೆ ಎಷ್ಟು ದಿನ ಗಟ್ಟಿಯಾಗಿ ಉಳಿಯಬಹುದು ಎಂದು ಅವರು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಒಟ್ಟಾಗಿ ಆಂತರಿಕ ಭದ್ರತೆ ಕಾಪಾಡಲು ಯಾವ ಕ್ರಮ ತೆಗೆದುಕೊಳ್ಳಬೇಕೆಂದು ಯೋಚಿಸಬೇಕಿದೆ. ರಕ್ಷಣಾ ಸಂಸ್ಥೆಯಾದ ಪೊಲೀಸ್ ವ್ಯವಸ್ಥೆಗೆ ನೈತಿಕ ಬೆಂಬಲ ಕೊಡಬೇಕಿದೆ ಎಂದು ವಿಶ್ಲೇಷಿಸಿದರು. 
 
ಪೊಲೀಸ್ ವ್ಯವಸ್ಥೆ ಅಸ್ಥಿರಗೊಳಿಸುವುದು, ಪೊಲೀಸ್ ಬಲದ ಒಳಗೆ ನಮಗೆ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಈ ರಾಜ್ಯ ಆಂತರಿಕ ಗಲಭೆ ಸೃಷ್ಟಿಸಿದರೆ, ಈ ರಾಜ್ಯ ಆಂತರಿಕ ಗಲಭೆಗೆ ಬಲಿ ಆದಲ್ಲಿ ಪೊಲೀಸ್ ವ್ಯವಸ್ಥೆ ಇದನ್ನು ನಿಯಂತ್ರಣ ಮಾಡಲಾರದು ಎಂಬ ಸಂದೇಶವನ್ನು ಈ ಸಮಾಜಕ್ಕೆ ಕಳಿಸಲು ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ರಾಜಕೀಯ ದೃಷ್ಟಿಕೋನದ ಆರೋಪ, ಹಿಂದೂ- ಮುಸ್ಲಿಂ ದೃಷ್ಟಿಕೋನ, ರಾಜಕೀಯ ಬಣ್ಣ ಕಟ್ಟಿದರೆ ಅದರಿಂದ ಈ ದೇಶವಿರೋಧಿ ಚಟುವಟಿಕೆಗಳನ್ನು ಮಾಡುವವರು ಸುರಕ್ಷಿತರಾಗುತ್ತಾರೆ. ಆಂತರಿಕ ದಂಗೆ ಸೃಷ್ಟಿಸುವ ಘಾತುಕ ಶಕ್ತಿಗಳು, ರಾಷ್ಟ್ರವಿರೋಧಿ ಶಕ್ತಿಗಳು ಸುರಕ್ಷಿತರಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.

ದೇಶವಿರೋಧಿ ಘಾತುಕ ಶಕ್ತಿಗಳನ್ನು ಮಟ್ಟ ಹಾಕುವ ಕುರಿತು ನಾವು ಯೋಚಿಸಬೇಕಿದೆ. ಪಿಎಫ್‍ಐ ನಿಷೇಧದ ಮೂಲಕ ನಾವು ಯಶ ಪಡೆದೆವೇ? ಎಂದು ಪ್ರಶ್ನಿಸಿದ ಅವರು, ರಾಷ್ಟ್ರದ ಭದ್ರತೆಗೆ ಅಪಾಯಕಾರಿ ಆಗಿರುವವರನ್ನು ನಾವೆಲ್ಲ ಒಂದಾಗಿ ಎದುರಿಸುತ್ತಾ ಇದ್ದೇವಾ ಎಂದು ಕೇಳಿದರು. ಇನ್ನೊಮ್ಮೆ ಆತ ತಲೆ ಎತ್ತದಂತೆ ನರ ಕಟ್ ಮಾಡುವ ಧೈರ್ಯ ನಮ್ಮಲ್ಲಿದೆಯೇ, ಆ ಬದ್ಧತೆ ಸರಕಾರಕ್ಕೆ ಇದೆಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ರಾಜಣ್ಣನಂಥವರು ತಮ್ಮ ಹೇಳಿಕೆ ಮೂಲಕ ಭವಿಷ್ಯಕ್ಕೆ ಏನು ಸಂದೇಶ ನೀಡುತ್ತಿದ್ದೇನೆ ಎಂದು ಯೋಚಿಸಬೇಕು. ಗೃಹ ಸಚಿವರು ಇಂಥ ಘಟನೆಗಳಲ್ಲಿ ತಾವು ತುಷ್ಟೀಕರಣದ ಕುರಿತು ಯೋಚಿಸಿದರೆ ಸರಿಯೇ ಎಂದು ಯೋಚಿಸಬೇಕು ಎಂದು ಆಗ್ರಹಿಸಿದರು. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದು ಒತ್ತಾಯಿಸಿದರು.

ರಾಷ್ಟ್ರವಿರೋಧಿ ಘಟನೆ ಮಾಡುವವರಿಗೆ ಯಾವ ಧರ್ಮ, ಜಾತಿ, ರಾಜಕೀಯ ಲೇಪವೂ ಇಲ್ಲ; ಅವರೆಲ್ಲರೂ ಈ ರಾಷ್ಟ್ರದ ಏಕತೆಗೆ ಧಕ್ಕೆ ಕೊಡುವಂಥವರು. ಅವರನ್ನು ರಾಷ್ಟ್ರವಿರೋಧಿಗಳೆಂದು ಗುರುತಿಸಿ ಉತ್ತರ ಕೊಡುವ ಬದ್ಧತೆ ಈ ಸರಕಾರದಿಂದ ಆಗಬೇಕಿದೆ. ಸರಕಾರ ಆ ನಿಟ್ಟಿನಲ್ಲಿ ಯೋಚಿಸಲಿ. ಬಿಜೆಪಿ ನಿಮಗೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಸರಕಾರವು ಹುಚ್ಚಾಟದ ಹೇಳಿಕೆಗಳನ್ನು ಬಿಟ್ಟು ಬಿಡಲಿ; ಕೊನೆ ಪಕ್ಷ ರಾಷ್ಟ್ರ, ರಾಜ್ಯವನ್ನು ರಕ್ಷಿಸುವಲ್ಲಿ ನಾವು ಪಕ್ಷವನ್ನು ಮೀರಿ ನಿಲ್ಲುವ ಬದ್ಧತೆಯನ್ನು ಈ ಸರಕಾರ ತೋರಿಸಬೇಕು. ಈ ಸರಕಾರ ಆ ನಿಟ್ಟಿನಲ್ಲಿ ದಿಟ್ಟ ಕ್ರಮ ತೆಗೆದುಕೊಳ್ಳಲಿ; ಆ ಕ್ರಮಕ್ಕೆ ನಮ್ಮ ಬೆಂಬಲವೂ ಇದೆ ಎಂದರು. ತಕ್ಷಣ ಕಾರ್ಯಪ್ರವೃತ್ತರಾಗಲು ವಿನಂತಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಮೆಟ್ರೋ ದರ ಇಳಿಕೆಗೆ ಯಾರು ಮುಂದಾಗಬೇಕು: ಸಂಸದ ತೇಜಸ್ವಿ ಸೂರ್ಯ ಹೇಳಿದ್ದು ಹೀಗೆ