Publish Date: Fri, 15 Feb 2019 (16:07 IST)
Updated Date: Fri, 15 Feb 2019 (16:12 IST)
ಜೂಜು ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಬರೋಬ್ಬರಿ 46 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಮಡಿವಾಳದ ಟೀಚರ್ಸ್ ಕಾಲೋನಿಯ ಎಸ್ಎಲ್ಎನ್ ವೆಲ್ಫೇರ್ ಅಸೋಸಿಯೇಷನ್ ಕ್ಲಬ್ನಲ್ಲಿ ಜೂಜಾಟವಾಡುತ್ತಿದ್ದ 46 ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು, 1 ಲಕ್ಷ 25 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಕ್ಲಬ್ನಲ್ಲಿ ಜೂಜಾಟ ನಡೆಯುತ್ತಿದ್ದ ಮಾಹಿತಿಯಾಧರಿಸಿ ದಾಳಿಯನ್ನು ಪೊಲೀಸರು ನಡೆಸಿದ್ದಾರೆ. 46 ಮಂದಿಯನ್ನು ಬಂಧಿಸಿ 1 ಲಕ್ಷ 25 ಸಾವಿರ ನಗದು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕ್ಲಬ್ನಲ್ಲಿ ಹಲವು ದಿನಗಳಿಂದ ಜೂಜಾಟದ ದಂಧೆ ನಡೆಸಲಾಗುತ್ತಿದ್ದು, ಕ್ಲಬ್ನ ಮಾಲೀಕ, ಸಿಬ್ಬಂದಿ ಹಾಗೂ ಕ್ಲಬ್ ನಡೆಸಲು ಬಾಡಿಗೆಗೆ ಕಟ್ಟಡ ನೀಡಿದ ಮಾಲೀಕನ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.