Select Your Language

Notifications

webdunia
webdunia
webdunia
webdunia

ಪರಾರಿಗೆ ಯತ್ನಿಸಿ ಸಿಕ್ಕಿಬಿದ್ದ ಭೂಪ!

ಪತ್ತೆ
ಪತ್ತೆಗೆ ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿಯನ್ನು ಬಂಧನ ಮಾಡಲಾಗಿದೆ.

ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಪತ್ತೆ ಮಾಡಲೆಂದು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಘಟನೆ ಕಲಬುರಗಿಯ ಗಂಗಾನಗರ ಬಡಾವಣೆಯಲ್ಲಿ ನಡೆದಿದೆ.

ಮಲ್ಲಿಕಾರ್ಜುನ ಅಪ್ಪಾಸಾಬ ಕೂಡಿ ಎಂಬಾತನೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ .ಎಸ್. ಶಿವಯೋಗಿ, ಸಿಬ್ಬಂದಿಗಳಾದ ಕಿಶೋರ, ಚನ್ನಮಲ್ಲಪ್ಪ, ಗಂಗಾಧರ ಅವರು ಆರೋಪಿಯ ಪತ್ತೆಗಾಗಿ ಗಂಗಾನಗರ ಬಡಾವಣೆಯಲ್ಲಿರುವ ಮನೆಗೆ ಹೋದಾಗ ಆರೋಪಿ ಮಲ್ಲಿಕಾರ್ಜುನ ಕೂಡಿ ಮನೆಯಿಂದ ಹೊರಗೆ ಬಂದು ಅವಾಚ್ಯವಾಗಿ ಬೈಯ್ದು ಪೊಲೀಸ್ ಸಿಬ್ಬಂದಿ ಕಿಶೋರ ಅವರನ್ನು ನೂಕಿದ್ದಾನೆ. ಮನೆ ಮಾಳಿಗೆಯಿಂದ ಜಿಗಿದು ತಪ್ಪಿಸಿಕೊಂಡು ಹೋಗಲು ಯತ್ನಿಸಿ ಕುಸಿದು ಬಿದ್ದಿದ್ದಾನೆ. ವೇಳೆ ಆರೋಪಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಪತ್ತೆಗೆ ಹೋದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪಿ ಮಲ್ಲಿಕಾರ್ಜುನ ಕೂಡಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಿಶೋರ, ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಆಪರೇಷನ್ ಕಮಲ ಆಡಿಯೋ; ಎಸ್‌ಐಟಿ ತನಿಖೆ ಪಕ್ಕಾ