Select Your Language

Notifications

webdunia
webdunia
webdunia
webdunia

ಯುವಕರಿಬ್ಬರ ಹತ್ಯೆ: ಪ್ರಮುಖ ಆರೋಪಿ ಅಂದರ್

webdunia
ಉಡುಪಿ , ಶನಿವಾರ, 9 ಫೆಬ್ರವರಿ 2019 (18:54 IST)
ಯುವಕರಿಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಉಡುಪಿ  ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದ ಇಬ್ಬರು ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.

ರಾಘವೇಂದ್ರ ಕಾಂಚನ್ (39) ಬಂಧಿತ ಆರೋಪಿಯಾಗಿದ್ದಾನೆ.  ಈತನೇ ಭರತ್ ಮತ್ತು ಯತೀಶ್ ಕೊಲೆಗೆ ಪ್ರಮುಖ ಸೂತ್ರಧಾರಿಯಾಗಿದ್ದು, ಮೂಲಕ ಬಂಧಿತರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ. ಹಿಂದೆ ರೌಡಿಶೀಟರ್ ಹರೀಶ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ ಮೂವರು ಆರೋಪಿಗಳನ್ನು ಶಿವಮೊಗ್ಗದ ಹೊಸನಗರದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು ರಾಜಶೇಖರ ರೆಡ್ಡಿ ಹಾಗೂ ರವಿಯನ್ನು ಕೊಡಗಿನಲ್ಲಿ ಬಂಧಿಸಲಾಗಿತ್ತು. ಜನವರಿ 27 ರಂದು ಗಲಾಟೆಯ ರಾಜಿಗೆ ಹೋಗಿದ್ದಾಗ ಆರೋಪಿಗಳು ಇಬ್ಬರು ಯುವಕರನ್ನು ಕೊಲೆ ಮಾಡಿದ್ದರು. ರಾಘವೇಂದ್ರ ಕಾಂಚನ್ಗೂ ಭರತ್ಗೂ ವೈಷಮ್ಯವಿತ್ತು.

ಇದರಿಂದ ಭರತ್ ಬೆಳವಣಿಗೆಯನ್ನು ರಾಘವೇಂದ್ರ ಕಾಂಚನ್ ಸಹಿಸಿರಲಿಲ್ಲ. ಹೀಗಾಗಿ ಸಂಚು ನಡೆಸಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಬಂಧಿತರಲ್ಲಿ ಮೂವರು ರೌಡಿಶೀಟರ್ ಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಕೊಲೆ ಮಾಡಿದ ಪತ್ನಿ ಸೇರಿ ಐವರಿಗೆ ಜೀವಾವಧಿ ಶಿಕ್ಷೆ