50ಕ್ಕೂ ಹೆಚ್ಚು ಹೋರಾಟಗಾರರ ಬಂಧನ ಮಾಡಿದ್ಯಾಕೆ?

ಸೋಮವಾರ, 11 ಫೆಬ್ರವರಿ 2019 (17:49 IST)
ರಸ್ತೆತಡೆ ನಡೆಸಿ ಪ್ರತಿಭಟನೆಗೆ ಕುಳಿತಿದ್ದ 50ಕ್ಕೂ ಹೆಚ್ಚು ಹೋರಾಟಗಾರರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ವೈಟಿಪಿಎಸ್ ಖಾಸಗೀಕರಣ ವಿರೋಧಿಸಿ ರಾಯಚೂರಿನಲ್ಲಿ ಕಂಪನಿ‌ ಮುಂದೆ ಕಾರ್ಮಿಕರಿಂದ ರಸ್ತೆ ತಡೆ ನಡೆಯಿತು.

ಸಿಪಿಐ(ಎಂ) ಪಕ್ಷದ ನೇತೃತ್ವದಲ್ಲಿ ಇಡೀ ಜಿಲ್ಲಾ ಕೇಂದ್ರದ ವಿವಿಧೆಡೆ ರಸ್ತೆ ತಡೆ ನಡೆಯಿತು. ವೈಟಿಪಿಎಸ್ ಖಾಸಗೀಕರಣ ಕೈ ಬಿಡುವಂತೆ ಆಗ್ರಹಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಹೈ.ಕ.ಉದ್ಯೋಗ ಸೃಷ್ಟಿಯ ಭರವಸೆ ನೀಡಿ ವೈಟಿಪಿಎಸ್ ಸ್ಥಾಪನೆಯಾಗಿತ್ತು. ಸರ್ಕಾರ 30 ತಿಂಗಳಿಗೆ 128 ಕೋಟಿಗೆ ಹೈದ್ರಾಬಾದ್ ಮೂಲದ ಕಂಪನಿ ನೀಡಲಾಗಿದೆ. ಈ ನೀತಿ ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಕಂಪನಿ ಖಾಸಗೀಕರಣ ಮಾಡುವುದರಿಂದ 750 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ಕೊಲೆಗಾರರನ್ನು ರಕ್ಷಣೆ ಮಾಡುತ್ತಿದೆಯಂತೆ!