Publish Date: Fri, 15 Feb 2019 (16:02 IST)
Updated Date: Fri, 15 Feb 2019 (16:03 IST)
ರಿಕ್ಷಾ ಚಾಲಕರೊಬ್ಬರು ರೈಲಿನಡಿ ಬಿದ್ದು ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ರೈಲಿನಡಿಗೆ ಬಿದ್ದು ರಿಕ್ಷಾ ಚಾಲಕರೊಬ್ಬರು ಮೃತಪಟ್ಟ ಘಟನೆ ಹಾರಾಡಿ ಕರ್ಮಲ ಸಮೀಪ ನಡೆದಿದೆ. ಮೂಲತಃ ಕಡಬ ತಾಲೂಕಿನ ಏನೆಕಲ್ಲು ಕಲ್ಲಾಜೆ ದಿ. ವಾಮನ ಗೌಡರ ಪುತ್ರ ರಿಕ್ಷಾ ಚಾಲಕ ನಾರಾಯಣ ಯಾನೆ ನಿತ್ಯ(48) ಮೃತಪಟ್ಟವರು.
ಪುತ್ತೂರಿನ ಹಾರಾಡಿಯ ನಂದಿಲ ಎಂಬಲ್ಲಿ ಕಳೆದ 7 ವರ್ಷಗಳಿಂದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದರು.
ಫೆ. 3ರಂದು ಬೆಳಿಗ್ಗೆ ರಿಕ್ಷಾದಲ್ಲಿ ಹೋದ ಅವರು ಮತ್ತೆ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದರು. ಫೆ. 13ರಂದು ಬಾಡಿಗೆ ಮನೆಯಿಂದ ತುಸು ದೂರದಲ್ಲಿರುವ ಕರ್ಮಲ ಎಂಬಲ್ಲಿ ಪಾಸೆಂಜರ್ ರೈಲಿನಡಿಗೆ ಅವರು ಬಿದ್ದು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೊದಲು ಮೃತದೇಹದ ಪತ್ತೆಯಾಗದ ಹಿನ್ನಲೆಯಲ್ಲಿ ರೈಲ್ವೇ ಪೊಲೀಸರು ಮೃತ ದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿಟ್ಟಿದ್ದರು. ಇದೀಗ ಮೃತ ದೇಹದ ಗುರುತು ಪತ್ತೆಯಾಗಿದೆ. ಮಂಗಳೂರು ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.