Select Your Language

Notifications

webdunia
webdunia
webdunia
webdunia

ಪಾಠ ಮಾಡುತ್ತಿದ್ದ ಶಿಕ್ಷಕ ಸತ್ತದ್ದು ಹೇಗೆ ಗೊತ್ತಾ?

webdunia
ಗುಡಿಬಂಡೆ , ಮಂಗಳವಾರ, 12 ಫೆಬ್ರವರಿ 2019 (20:15 IST)
ತರಗತಿಯಲ್ಲ ಪಾಠ ಮಾಡುತ್ತಿರುವಾಗಲೇ ಶಿಕ್ಷಕರೊಬ್ಬರು ಸಾವಿಗೀಡಾದ ಘಟನೆ ನಡೆದಿದೆ.

ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೃದಯಾಘಾತದಿಂದ  ಶಿಕ್ಷಕ ಸಾವನ್ನಪ್ಪಿದ್ದಾರೆ.

ತರಗತಿಯಲ್ಲಿ ಪಾಠ ಮಾಡುತ್ತಲೇ ಕುಸಿದ ಶಿಕ್ಷಕನನ್ನು ಅಲ್ಲಿನ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಿಸದೇ ಶಿಕ್ಷಕ ಸಾವನ್ನಪ್ಪಿದ್ದಾರೆ. ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ದೈಹಿಕ ಶಿಕ್ಷಣ ತರಬೇತಿ ಶಿಕ್ಷಕ ರಾಮಕೃಷ್ಣಪ್ಪ(52) ಮೃತ ಶಿಕ್ಷಕರಾಗಿದ್ದಾರೆ. ಶಿಕ್ಷಕನ ನಿಧನದಿಂದಾಗಿ ಶಾಲೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
Share this Story:

Follow Webdunia kannada

ಮುಂದಿನ ಸುದ್ದಿ

ಪೊಲೀಸ್ ದೌರ್ಜನ್ಯ ಖಂಡಿಸಿ ವಕೀಲರ ಪ್ರತಿಭಟನೆ