Publish Date: Sun, 10 Feb 2019 (18:56 IST)
Updated Date: Sun, 10 Feb 2019 (18:58 IST)
ಹಟ್ಟಿ ಚಿನ್ನದ ಗಣಿಯಲ್ಲಿ ಭಾರಿ ಅವಘಡ ಸಂಭವಿಸಿದೆ.
ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿಯಲ್ಲಿ ಅವಘಡ ಸಂಭವಿಸಿದೆ. ಮಣ್ಣು ಕುಸಿದು ಫೋರಮ್ಯಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.
ಮಲ್ಲಪ್ಪ ಶಾ ಬಳಿ ಅವರ ಕಾರ್ಮಿಕರು ಗಣಿಗಾರಿಕೆಯಲ್ಲಿ ತೊಡಗಿದ್ದ ಸಂದರ್ಭದಲ್ಲಿ ಗಣಿಯ ಮಣ್ಣು, ಕಲ್ಲು ಕುಸಿದಿರುವುದನ್ನು ಪರಿಶೀಲಿಸಲು ಫೋರಮ್ಯಾನ್ ತೆರಳಿದ್ದರು. ಈ ವೇಳೆ ನಾಲ್ವರು ಕಾರ್ಮಿಕರು ಹಾಗೂ ಫೋರಮ್ಯಾನ್ ದೌಲಸಾಬ್ ಅನ್ವರಿ ಮೇಲೆ ಮಣ್ಣು ಕುಸಿದಿದೆ.