Select Your Language

Notifications

webdunia
webdunia
webdunia
webdunia

ದೇಗುಲ ಏರಿದ ಬಾಲಕ ಹೆಣವಾಗಿದ್ದು ಹೇಗೆ?

ದೇಗುಲ ಏರಿದ ಬಾಲಕ ಹೆಣವಾಗಿದ್ದು ಹೇಗೆ?
ಚಾಮರಾಜನಗರ , ಶುಕ್ರವಾರ, 1 ಫೆಬ್ರವರಿ 2019 (15:21 IST)
ಪಾರಿವಾಳಗಳ ಮೇಲಿನ ಆಸೆ ಆ ಬಾಲಕನ ಬದುಕನ್ನೇ ಬಲಿತೆಗೆದುಕೊಂಡಿದೆ.

ದೇಗುಲದ ಗೋಪುರದಲ್ಲಿ ಚಿಲಿಪಿಲಿಗುಡುತ್ತಿದ್ದ ಪಾರಿವಾಳಗಳನ್ನು ಹಿಡಿಯಲು ಹೋಗಿದ್ದ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಚನ್ನಪ್ಪನ್ನಪುರ ವೀರಭದ್ರಸ್ವಾಮಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಶಿವು(16) ಮೃತಪಟ್ಟ ಬಾಲಕ. ಗುರುವಾರ ರಾತ್ರಿ ದೇವಾಲಯಕ್ಕೆ ತೆರಳಿದ್ದ ವೇಳೆ ಪಾರಿವಾಳಗಳನ್ನು ಹಿಡಿಯಲು ಶಿವು ದೇಗುಲದ ಗೋಪುರ ಏರಿದ್ದಾನೆ. ಆ ವೇಳೆ ಕಾಲು ಜಾರಿ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಬೆಳಗ್ಗೆ ವಾಯು ವಿಹಾರಿಗಳಿಂದ ಬಾಲಕ ಮೃತಪಟ್ಟ ವಿಷಯ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಶವವನ್ನು ರವಾನಿಸಲಾಗಿದೆ. ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರಾಗಿ ಗೀತಾ ಮಹದೇವ ಪ್ರಸಾದ್