ಪತ್ನಿಗೆ ನೀಲಿ ಚಿತ್ರಗಳನ್ನು ತೋರಿಸಿ ಶಿಕ್ಷಕ ಪತಿ ಮಾಡಿದ್ದೇನು ಗೊತ್ತಾ?

ಭಾನುವಾರ, 10 ಫೆಬ್ರವರಿ 2019 (10:14 IST)
ಬೆಂಗಳೂರು : ಕಾಮುಕ ಪತಿಯೊಬ್ಬ ತನ್ನ ಪತ್ನಿಗೆ ನೀಲಿ ಚಿತ್ರಗಳನ್ನು ತೋರಿಸಿ ಪ್ರತಿನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.


ವಸಂತ್ ಇಂತಹ ನೀಚ ಕೆಲಸ ಮಾಡಿದ ಕಾಮುಕ. ದೊಡ್ಡಬಳ್ಳಾಪುರ ತಾಲೂಕಿನ ಉಜಿನಿ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಈತ ಪತ್ನಿಗೆ ಪ್ರತಿನಿತ್ಯ ನೀಲಿ ಚಿತ್ರ ತೋರಿಸಿ ಅದೇ ರೀತಿ ನಡೆದುಕೋ ಎಂದು ಹಿಂಸೆ ಕೊಡುತ್ತಿದ್ದ. ಅಷ್ಟೇ ಅಲ್ಲದೇ  ವರದಕ್ಷಿಣೆ ಕಿರುಕುಳ ಕೂಡ  ನೀಡುತ್ತಿದ್ದ.


ಈ ಹಿನ್ನಲೆಯಲ್ಲಿ ಪತ್ನಿ ಪತಿಯ ವಿರುದ್ಧ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ಪತಿ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿದ್ಯಾರ್ಥಿನಿಗೆ ನೀತಿ ಪಾಠ ಹೇಳಬೇಕಾದ ಶಿಕ್ಷಕ ಮಾಡಿದ್ದೇನು ಗೊತ್ತಾ?