ಅಪರೇಷನ್ ಕಮಲಕ್ಕೆ ಒಳಗಾದ್ರಾ ಶಾಸಕ ಬಿ.ಸಿ ಪಾಟೀಲ್? ಈ ಬಗ್ಗೆ ಅವರ ಪ್ರತಿಕ್ರಿಯೆ ಏನು?

ಶನಿವಾರ, 9 ಫೆಬ್ರವರಿ 2019 (13:04 IST)
ಬೆಂಗಳೂರು : ಹಿರೆಕೇರೂರು ಶಾಸಕ ಬಿ.ಸಿ ಪಾಟೀಲ್ ಅವರು ಮುಂಬೈ ರೆಸಾರ್ಟ್ ಗೆ ತೆರಳಿ ಅತೃಪ್ತ ಶಾಸಕರ ಜೊತೆ ಸೇರಿಕೊಂಡಿದ್ದಾರೆ ಎಂಬ ಸುದ್ಧಿ ರಾಜಕೀಯವಲಯದಲ್ಲಿ ಹರಿದಾಡುತ್ತಿದೆ. ಆದರೆ ಇದೀಗ ಈ ಬಗ್ಗೆ ಶಾಸಕ ಬಿ.ಸಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು,’ ನನಗೆ ಬೇಸರ ಆಗಿದ್ದು ಸತ್ಯ. ಸಚಿವ ಸ್ಥಾನ ನೀಡುವಾಗ ನಮ್ಮ ಜಿಲ್ಲೆಯನ್ನು ಪರಿಗಣಿಸಿಲ್ಲ. ನನಗೂ ಆದ್ಯತೆ ನೀಡಿಲ್ಲ ಅನ್ನೋ ಬೇಸರ ಇದೆ. ಹಾಗಂತ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

 

‘ಇಂದು ಬೆಳಗ್ಗೆ ಸಿದ್ದರಾಮಯ್ಯರನ್ನ ಭೇಟಿ ಮಾಡಿ ನನ್ನ ನೋವನ್ನ ಹೇಳಿಕೊಂಡಿದ್ದೇನೆ. ನಾನು ಮುಂಬೈಗೆ ಹೋಗಿದ್ದೆ ಎನ್ನುವುದು ಸುಳ್ಳು. ನಾನು ಎಲ್ಲೂ ಹೋಗಿಲ್ಲ. ನಾನು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಈಗ ನನ್ನ ಕ್ಷೇತ್ರ ಹಿರೆಕೇರೂರಿಗೆ ಹೋಗುತ್ತಿದ್ದೇನೆ. ಸೋಮವಾರದಿಂದ ಅಧಿವೇಶನಕ್ಕೆ ಬರುತ್ತೇನೆ’ ಎಂದು ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.


 

 

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಂವಿಧಾನಬದ್ಧ ಸರ್ಕಾರ ಉರುಳಿಸಲು ಮೂವರಿಂದ ತಂತ್ರ- ರಣದೀಪ್ ಸಿಂಗ್ ಸುರ್ಜೇವಾಲ