ರಾಜ್ಯದ ಹಲವೆಡೆ ಇನ್ನೆರಡು ದಿನ ಗುಡುಗು ಸಹಿತ ಮಳೆಯಾಗುವ ಸೂಚನೆ

ಭಾನುವಾರ, 10 ಫೆಬ್ರವರಿ 2019 (10:02 IST)
ಬೆಂಗಳೂರು : ಬೆಂಗಳೂರಿನ ವಿವಿಧ ಕಡೆ ಶನಿವಾರ  ಗುಡುಗು ಸಹಿತ ಬಾರೀ ಮಳೆಯಾಗಿದ್ದು ಇನ್ನೆರಡು ದಿನ ನಗರದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.


ಕಾರ್ಪೊರೇಷನ್, ಬನಶಂಕರಿ, ಬಸವನಗುಡಿ, ಮೆಜೆಸ್ಟಿಕ್, ಓಕಳಿಪುರಂ, ಗಾಂಧಿನಗರ, ಕೋರಮಂಗಲ, ಬೊಮ್ಮನಹಳ್ಳಿ, ಜಯನಗರ, ಫ್ರೇಜರ್‍ಟೌನ್, ಟೌನ್‍ಹಾಲ್, ಲಾಲ್‍ಬಾಗ್ ಸೇರಿದಂತೆ ಹಲವೆಡೆ ಭಾರೀ ಮಳೆಯಾದ ಕಾರಣ ಜನ ಜೀವನ ಕೊಂಚ ಮಟ್ಟಿಗೆ ಅಸ್ತವ್ಯಸ್ತವಾಗಿತ್ತು. ಅಲ್ಲಲ್ಲಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.


ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ, ರಾಜ್ಯದ ವಿವಿಧೆಡೆ ಮಳೆಯಾಗಿದ್ದು, ಇಂದೂ ಕೂಡ ಮಳೆ ಬರೋ ಸಾಧ್ಯತೆಗಳಿವೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಾಂಗ್ರೆಸ್‌ನಲ್ಲಿದ್ದ ತನ್ನ ಆಪ್ತರು ಹಾಗೂ ಅಭಿಮಾನಿಗಳು ಬಿಜೆಪಿ ಸೇರುವಂತೆ ಕರೆ ನೀಡಿದ ಎಸ್.ಎಂ ಕೃಷ್ಣ