Select Your Language

Notifications

webdunia
webdunia
webdunia
webdunia

ಡಿಸಿ ನಿವಾಸದ ಪಕ್ಕದಲ್ಲೇ ಪ್ರಾಣಬಿಟ್ಟ ಹಸುಳೆ; ಕ್ರೂರತನ ಮೆರೆದ ತಾಯಿ!

ಡಿಸಿ ನಿವಾಸದ ಪಕ್ಕದಲ್ಲೇ ಪ್ರಾಣಬಿಟ್ಟ ಹಸುಳೆ; ಕ್ರೂರತನ ಮೆರೆದ ತಾಯಿ!
ಹಾಸನ , ಬುಧವಾರ, 13 ಫೆಬ್ರವರಿ 2019 (14:11 IST)
ಆಗಷ್ಟೇ ಹುಟ್ಟಿದ ಹೆತ್ತ ಹಸುಳೆಯ‌ನ್ನು ತಾಯಿಯೊಬ್ಬಳು ರಸ್ತೆ ಬದಿ ಮಲಗಿಸಿ ಹೋದ ಘಟನೆ ನಡೆದಿದೆ.

ಆಗಿನ್ನೂ ಹುಟ್ಟಿದ ಮಗುವನ್ನು ತಾಯಿಯೊಬ್ಬಳು ಬೀದಿ ಪಾಲು ಮಾಡಿದ್ದಾಳೆ. ಹಾಸನ ನಗರದ ಬಿ.ಎಂ ರಸ್ತೆ ಬಳಿಯ ಡಿಸಿ ನಿವಾಸದ ಪಕ್ಕದಲ್ಲೇ ಮಗುವನ್ನು ತಾಯಿಯೊಬ್ಬರು ಮಲಗಿಸಿ ಹೋಗದ್ದಾರೆ. ರಾತ್ರಿಯಿಡಿ ಚಳಿಯಲ್ಲಿ‌ ನಡುಗಿ ನವಜಾಥ ಶಿಶು ಪ್ರಾಣ ಬಿಟ್ಟಿದೆ. ಎದುರಲ್ಲಿಯೇ ಇರುವ ಸರ್ಕಾರಿ ಆಸ್ಪತ್ರೆಯಿಂದ ತಂದು ರಸ್ತೆ ಬದಿ ಶಿಶುವನ್ನು ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

ಅಕ್ರಮ ಸಂಬಂಧ ಹಿನ್ನಲೆ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಮುಂಜಾನೆ ಮಗುವಿನ ಮೃತದೇಹ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಡಾವಣೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಶುವಿನ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಡ್ಡೆಹುಡುಗ-ಹುಡುಗಿಯರ ಅಡ್ಡಾದಿಡ್ಡಿ ಬೈಕ್ ಸವಾರಿ - ಲಗಾಮು ಯಾವಾಗ?