ಪ್ರತ್ಯೇಕ ತಾಲೂಕಿಗೆ ಒತ್ತಾಯಿಸಿದ ಬಂದ್ ಯಶಸ್ವಿ!

ಸೋಮವಾರ, 11 ಫೆಬ್ರವರಿ 2019 (18:35 IST)
ಪ್ರತ್ಯೇಕ ಕಾವೇರಿ ತಾಲ್ಲೂಕಿಗೆ ಒತ್ತಾಯಿಸಿ ನಡೆಸಲಾದ ಕುಶಾಲನಗರ ಬಂದ್  ಯಶಸ್ವಿಯಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರದಲ್ಲಿ ಬಂದ್ ಗೆ ಕರೆ ನೀಡಲಾಗಿತ್ತು. ಕುಶಾಲನಗರ ವ್ಯಾಪ್ತಿಯನ್ನು ಕಾವೇರಿ ತಾಲೂಕಾಗಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿರುವ ಹೋರಾಟ ಸಮಿತಿ ಸದಸ್ಯರು ಬೇಡಿಕೆ ಈಡೇರಿಕೆಗೆ ಸರಕಾರವನ್ನು ಒತ್ತಾಯ ಮಾಡಿದರು.  

ಕಾವೇರಿ ತಾಲ್ಲೂಕಿಗಾಗಿ ಕಳೆದ ಐದು ವರ್ಷಗಳಿಂದ ನಿರಂತರ ಹೋರಾಟ  ನಡೆಸುತ್ತಿರುವ  ಸಮಿತಿ ಸದಸ್ಯರು, ಈ ಬಾರಿಯ ಬಜೆಟ್ ನಲ್ಲಿಯೂ ಕಾವೇರಿ ತಾಲ್ಲೂಕನ್ನು ಕೈಬಿಟ್ಟಿರುವುದನ್ನು ಖಂಡಿಸಿದರು. ಬೆಳಿಗ್ಗೆನಿಂದಲೇ ನಗರದ ವಿವಿಧ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಿತವಾಗಿ ಬಂದ್ ಆಗಿದ್ದವು.

ಕುಶಾಲನಗರದ ಕಾರ್ಯಪ್ರವೃತ್ತದಲ್ಲಿ ವಿ. ಪಿ. ಶಶಿಧರ್ ನೇತೃತ್ವದಲ್ಲಿ ವಿವಿಧ  ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉತ್ತರ ಕರ್ನಾಟಕ ಪಕ್ಷ ಸ್ಥಾಪನೆಗೆ ಜನಾಭಿಪ್ರಾಯ ಸಂಗ್ರಹ ಶುರು!