Publish Date: Sat, 09 Feb 2019 (18:11 IST)
Updated Date: Sat, 09 Feb 2019 (18:14 IST)
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರಕಾರದ ಬಜೆಟ್ ಮಂಡನೆಯಲ್ಲಿಯಲ್ಲಿ ತಮ್ಮ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡದಿರುವುದನ್ನು ಖಂಡಿಸಿ ಕರೆ ನೀಡಲಾಗಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ವಿಜಯಪುರ ಜಿಲ್ಲೆಯ ಆಲಮೇಲ ನೂತನ ತಾಲೂಕು ಘೋಷಣೆ ಮಾಡದ ಹಿನ್ನಲೆ ಕರೆ ನೀಡಿದ್ದ ಬಂದ್ ಗೆ ಸಂಪೂರ್ಣ ಯಶಸ್ವಿಯಾಗಿದೆ. ನೂತನ ತಾಲೂಕು ಘೋಷಣೆಯಾಗದೇ ಇರುವುದನ್ನು ವಿರೋಧಿಸಿ ಪಕ್ಷಾತೀತ, ಸ್ವಯಂ ಪ್ರೇರಿತವಾಗಿ ಕರೆ ನೀಡಿದ್ದ ಆಲಮೇಲ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಪಟ್ಟಣದಲ್ಲಿ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಮಾರುಕಟ್ಟೆ ಹಾಗೂ ಅಂಗಡಿ ಮುಗ್ಗಟ್ಟುಗಳು, ವ್ಯಾಪಾರ ಬಂದ್ ಮಾಡಿದ್ದರು. ಆಲಮೇಲದ ಸುತ್ತಮುತ್ತಲಿನ ಜನತೆಗೆ ನಿರಾಶೆಯುಂಟಾಗಿರುವುದರಿಂದ ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಗೆ, ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರಿಗೆ ತಕ್ಕಪಾಠ ಕಲಿಸುವುದಾಗಿ ಸಾವ೯ಜನಿಕರು ಆಕ್ರೋಶ ವ್ಯಕ್ತಪಡಿಸಿದರು.