ಬೆಂಗಳೂರು : ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಧಿಕಾರ(ಟ್ರಾಯ್)ಜಾರಿಗೊಳಿಸಿರುವ ಹೊಸ ದರ ನೀತಿಯನ್ನು ಖಂಡಿಸಿ ಕೇಬಲ್ ಆಪರೇಟರ್ ಗಳು ಗುರುವಾರ (ಇಂದು)ರಾಜ್ಯವ್ಯಾಪಿ ಕೇಬಲ್ ಬಂದ್ ಗೆ ಕರೆ ನೀಡಿದೆ.
ಟ್ರಾಯ್ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಹಿನ್ನಲೆಯಲ್ಲಿ ಗುರುವಾರದಂದು ಬೆಳಗ್ಗೆ 6ರಿಂದ ರಾತ್ರಿ 10 ಗಂಟೆವರೆಗೆ ಕೇಬಲ್ ಸ್ಥಗಿತಗೊಳಿಸಲಾಗುತ್ತಿದೆ. ರಾತ್ರಿ 10ರ ನಂತರ ಎಂದಿನಂತೆ ಕೇಬಲ್ ಸೌಲಭ್ಯ ಇರಲಿದೆ. ದಕ್ಷಿಣ ಭಾರತದಾದ್ಯಂತ ಕೇಬಲ್ ಬಂದ್ ಆಗಲಿದೆ ಎಂದು ತಿಳಿದು ಬಂದಿದೆ.
‘ಇದು ಸಾಂಕೇತಿಕ ಪ್ರತಿಭಟನೆ ಅಷ್ಟೇ. ಜ.31ರವರೆಗೆ 'ಟ್ರಾಯ್'ಗೆ ಗಡುವು ನೀಡುತ್ತಿದ್ದೇವೆ, ಗ್ರಾಹಕರಿಗೆ ಹೊರೆಯಾಗದಂತೆ ಮತ್ತು ಕೇಬಲ್ ಆಪರೇಟರ್‌ಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಫೆ.1ರಿಂದ ಇಡೀ ದೇಶದಲ್ಲಿಯೇ ಕೇಬಲ್ ಬಂದ್ ಮಾಡಲಾಗುವುದು' ಎಂದು ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್‌ಗಳ ಅಸೋಸಿಯೇಷನ್‌ನ ಅಧ್ಯಕ್ಷ ಎಸ್.ಪ್ಯಾಟ್ರಿಕ್ ರಾಜು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.