Select Your Language

Notifications

webdunia
webdunia
webdunia
webdunia

ತಿಪ್ಪರಲಾಗಾ ಹಾಕಿದರೂ ಸರಕಾರ ಬದಲಾಗೊಲ್ಲ ಎಂದವರಾರು?

ಮೈತ್ರಿ ಸರಕಾರ
ಕಲಬುರಗಿ , ಶನಿವಾರ, 9 ಫೆಬ್ರವರಿ 2019 (17:38 IST)
ಬಿಜೆಪಿಯ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ತಿಪ್ಪರಲಾಗಾ ಹಾಕಿದರೂ ರಾಜ್ಯ ಸರಕಾರ ಬದಲಾಗೋದಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಯಡಿಯೂರಪ್ಪ ಸೇರಿದಂತೆ ಯಾರೇ ತಿಪ್ಪರಲಾಗ ಹಾಕಿದರೂ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಸಾಧ್ಯವಿಲ್ಲ. ಹೀಗಂತ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮೈತ್ರಿ ಸರಕಾರ ಅಸ್ಥಿರಗೊಳಿಸುವ ಯತ್ನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನೇರ ಕೈವಾಡವಿದೆ ಎಂದು ಖರ್ಗೆ ಆರೋಪಿಸಿದರು.

ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡುತ್ತಿದ್ದಾರೆ. ಈ ಕುರಿತು ಸಾಕ್ಷಿಗಳು ಬಹಿರಂಗವಾಗುತ್ತಿವೆ. ಹೀಗಾಗಿ ಈ ವಿಷಯವನ್ನು ಸ್ಪೀಕರ್ ಹಾಗೂ ಎಸಿಬಿ ಗಂಭೀರವಾಗಿ ಪರಿಗಣಿಸಬೇಕು.

ಮೈತ್ರಿ ಸರಕಾರ ಅಸ್ತಿರಗೊಳಿಸಲು ಬಿಜೆಪಿ ಯತ್ನ ಮತ್ತೆ ವಿಫಲವಾಗಲಿದೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಸಿ.ಪಾಟೀಲ್ ಖಡಕ್ ನಿರ್ಧಾರ ಏನು ಗೊತ್ತಾ?