Select Your Language

Notifications

webdunia
webdunia
webdunia
webdunia

ಚಾಕು ತೋರಿಸಿ ದೋಚುತಿದ್ದ ಹಳೇ ಕಳ್ಳರು ಏನಾದರು ಗೊತ್ತಾ?

ಚಾಕು ತೋರಿಸಿ ದೋಚುತಿದ್ದ ಹಳೇ ಕಳ್ಳರು ಏನಾದರು ಗೊತ್ತಾ?
ಬೆಂಗಳೂರು , ಮಂಗಳವಾರ, 12 ಫೆಬ್ರವರಿ 2019 (13:50 IST)
ಕಳ್ಳರು ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ರು. ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ರು.  ಆದರೆ ಈಗ ಅಂದರ್ ಆಗಿದ್ದಾರೆ.

ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಮಾಂಗಲ್ಯಸರ ದೋಚಿ ಪರಾರಿಯಾಗಿದ್ದ ಮೂವರು ಹಳೇಕಳ್ಳರನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.

ನಾಗವಾರದ ಸೈಫ್ ಖಾನ್ (28), ಗೋವಿಂದಪುರದ ನಯಾಬ್ ರಸುಲ್ (29), ಹೆಗಡೆ ನಗರದ ಸಬ್ದಾರ್ ಅಹಮದ್ ಅಲಿಯಾಸ್ ನೀಗ್ರೋ (29) ಬಂಧಿತ ಆರೋಪಿಗಳಾಗಿದ್ದಾರೆ.

ಬಂಧಿತರಿಂದ 9.5 ಲಕ್ಷ ರೂ. ಮೌಲ್ಯದ 175 ಗ್ರಾಂ ಚಿನ್ನಾಭರಣ, 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಹೆಬ್ಬಾಳದ ಎರಡು ಸರಗಳ್ಳತನ, ಒಂದು ಸುಲಿಗೆ, 2 ಕನ್ನಗಳವು, 2 ದ್ವಿಚಕ್ರ ವಾಹನ ಕಳವು, ನಂದಿನಿ ಲೇಔಟ್ ಒಂದು ಸುಲಿಗೆ, ಜಾಲಹಳ್ಳಿಯ ಒಂದು ಸರಗಳವು, ಹೆಚ್..ಎಲ್ ಒಂದು ಸುಲಿಗೆ ಸೇರಿ 12 ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.

ಆರೋಪಿಗಳು ಹಳೇಕಳ್ಳರಾಗಿದ್ದು, ಒಂಟಿಯಾಗಿ ಓಡಾಡುವವರನ್ನು ಬೆದರಿಸಿ, ಸುಲಿಗೆ ಮಾಡುತ್ತಿದ್ದರು.Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿಯ ಹೋಟೆಲ್ ನಲ್ಲಿ ಅಗ್ನಿ ದುರಂತ; ಸಾವಿನ ಸಂಖ್ಯೆ 17ಕ್ಕೆ ಏರಿಕೆ