Select Your Language

Notifications

webdunia
webdunia
webdunia
webdunia

ಬೆಂಕಿ ಹತ್ತಿರೋ ಅರಣ್ಯದಲ್ಲಿ ಮೋಜು ಮಸ್ತಿ!

ಬೆಂಕಿ ಹತ್ತಿರೋ ಅರಣ್ಯದಲ್ಲಿ ಮೋಜು ಮಸ್ತಿ!
ನಾಗರಹೊಳೆ , ಬುಧವಾರ, 27 ಫೆಬ್ರವರಿ 2019 (17:54 IST)
ಒಂದೆಡೆ ಬೆಂಕಿ ಅವಘಡಕ್ಕೆ ನಾಡಿನ ಜನರು ಮರಗುತ್ತಿದ್ದರೆ, ಮತ್ತೊಂದೆಡೆ ಅದೇ ಪ್ರದೇಶದಲ್ಲಿ ಮೋಜು ಮಸ್ತಿ ಬಲು ಜೋರಾಗಿದೆ.

ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಸಫಾರಿ ವ್ಯಾನ್ ಮೇಲೆ‌ ಕುಳಿತ ಪ್ರವಾಸಿಗರು ಮೋಜು ಮಸ್ತಿ ನಡೆದಿರುವುದು ಬೆಳಕಿಗೆ ಬಂದಿದೆ.

ಸಫಾರಿ ವಾಹನಕ್ಕೆ ಓವರ್ ಲೋಡ್ ಆರೋಪ ಕೇಳಿಬಂದಿದೆ. ಹುಲಿ ಕಂಡಾಕ್ಷಣ ಸಫಾರಿ ವಾಹನದ ಮೇಲೆ ಕುಳಿತು ಪೋಟೊ ಕ್ಲಿಕ್ಕಿಸುತ್ತಿದ್ದಾರೆ ಪ್ರವಾಸಿಗರು.

ದಮ್ಮನಕಟ್ಟೆ ಹಾಗೂ ಜೆ ಎಲ್ ಆರ್ ಸಫಾರಿ ವಾಹನಗಳಲ್ಲಿ ಮೋಜು ಮಸ್ತಿ ನಡೆದಿದೆ.

ಬೆಂಕಿ ನಂದಿಸಲು ಹರಸಾಹಸವನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಂದೆಡೆ ಪಡುತ್ತಿದ್ದರೆ, ಇತ್ತ ಅಂತರಸಂತೆ ವಲಯದಲ್ಲಿ ಹೇಳೋರಿಲ್ಲ ಕೇಳೋರಿಲ್ಲದ ಪರಿಸ್ಥಿತಿ ಎಂಬಂತಾಗಿದೆ. ಈ ವೇಳೆಯನ್ನ  ದುರ್ಬಳಕೆ  ಮಾಡಿಕೊಳ್ಳುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ.

ಆರ್ ಎಫ್ ಒ ವಿನಯ್ ಹಣದಾಸೆಗೆ ದುರ್ಬಳಕೆ ಮಾಡಿಕೊಳ್ಳುತ್ತೊದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ದಮ್ಮನಕಟ್ಟೆ ಸಫಾರಿ ಪಾಯಿಂಟ್ ವಾಹನದ ಮೇಲೆ ಜನರಿಗೆ ಕುಳಿತುಕೊಳ್ಳಲು ಅವಕಾಶ ನೀಡಿದ್ದು ಯಾರು? ಎಂಬ ಪ್ರಶ್ನೆ ಕೇಳಿಬರುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ದಲಿತ ಸಿಎಂ ಹೇಳಿಕೆ: ಖರ್ಗೆ ಹೇಳಿದ್ದೇನು ಗೊತ್ತಾ?