Select Your Language

Notifications

webdunia
webdunia
webdunia
webdunia

ಬಂಡಿಪುರ ಅರಣ್ಯದಲ್ಲಿ ಬೆಂಕಿ; ಹೆಲಿಕಾಪ್ಟರ್ ಬಳಕೆ ಬಗ್ಗೆ ಸಚಿವ ಹೇಳಿದ್ದೇನು?

ಬಂಡಿಪುರ ಅರಣ್ಯದಲ್ಲಿ ಬೆಂಕಿ; ಹೆಲಿಕಾಪ್ಟರ್ ಬಳಕೆ ಬಗ್ಗೆ ಸಚಿವ ಹೇಳಿದ್ದೇನು?
ಚಾಮರಾಜನಗರ , ಮಂಗಳವಾರ, 26 ಫೆಬ್ರವರಿ 2019 (17:13 IST)
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಅರಣ್ಯದಲ್ಲಿ ಬೆಂಕಿ ನಂದಿಸಲು ಯತ್ನ ಮುಂದುವರಿದಿವೆ. ಈ ನಡುವೆ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ.

ನೀರಿನ ಮುಖಾಂತರ ಮ್ಯಾನ್ಯುಯಲ್ ಆಗಿ ಬೆಂಕಿ ನಂದಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಹೆಲಿಕಾಪ್ಟರ್ ನಲ್ಲಿ ನೀರು ಸಿಂಪಡಣೆ ಮಾಡುವ ಅಗತ್ಯ ಇಲ್ಲ, ಸ್ಟ್ಯಾಂಡ್ ಬೈ ಇಡುತ್ತಿದ್ದೇವೆ. ಎರಡುವರೆ ಸಾವಿರ ಹೇಕ್ಟರ್ ಅರಣ್ಯ ನಾಶವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಜಿಎಸ್ ಬೆಟ್ಟ ವಲಯ ಅರಣ್ಯಕ್ಕೆ ಸಚಿವ ಜಾರಕಿ ಹೋಳಿ ಭೇಟಿ ನೀಡಿದ ಸಂದರ್ಭ ಮಾತನಾಡಿದ್ದು, ಕಳೆದ ನಾಲ್ಕೈದು ದಿನದಿಂದ ಬಂಡಿಪುರ ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಳೆದ ರಾತ್ರಿಯಿಂದ ನಿಯಂತ್ರಣಕ್ಕೆ ಬಂದಿದೆ ಎಂದರು. ಅರಣ್ಯ ಇಲಾಖೆ ಐದು ತಂಡಗಳಾಗಿ ಬೇರೆ ಬೇರೆ ಕಡೆಗಳಲ್ಲಿ ಬೆಂಕಿ ನಿಯಂತ್ರಿಸಲು  ಪ್ರಯತ್ನಿಸುತ್ತಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಬೆಂಕಿ ಸ್ವಾಭಾವಿಕವಾಗಿ ಆಗಿದ್ರೆ ಬೆಂಕಿ ಆರಿಸಬಹುದಿತ್ತು, ಆದರೆ ಇದು ಮನುಷ್ಯನ ಕುಕೃತ್ಯದಿಂದ ನಡೆದಿರುವ ಘಟನೆಯಾಗಿದೆ ಎಂದಿದ್ದಾರೆ.  




Share this Story:

Follow Webdunia kannada

ಮುಂದಿನ ಸುದ್ದಿ

ಗಣಿನಾಡಲ್ಲಿ ಕಾರ್ಖಾನೆ ಸ್ಥಾಪನೆಗೆ ಹೆಚ್ಚಿದ ವಿರೋಧ