Select Your Language

Notifications

webdunia
webdunia
webdunia
webdunia

ನೀಲಗಿರಿ ತೋಪಿನಲ್ಲಿ ಬೆಂಕಿ; ಸುಟ್ಟದ್ದೆಷ್ಟು ಗೊತ್ತಾ?

ನೀಲಗಿರಿ
ನೀಲಗಿರಿ ತೋಪಿನಲ್ಲಿ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಲಕ್ಷಾಂತರ ಮೌಲ್ಯದ ನೀಲಗಿರಿ ಭಸ್ಮವಾಗಿದೆ.

ನೆಲಮಂಗಲದ ಬಳಿಯಿರುವ ನೀಲಗಿರಿ ತೋಪಿನಲ್ಲಿ ಆಕಸ್ಮಿಕ ಬೆಂಕಿ ತಗಲಿ  ಸುಮಾರು 15   ಎಕರೆಯಲ್ಲಿ ಬೆಳೆಯಲಾಗಿದ್ದ  ನೀಲಗಿರಿ ಭಸ್ಮವಾಗಿರುವ ಘಟನೆ ನಡೆದಿದೆ.

ಚನ್ನೋಹಳ್ಳಿ ಗ್ರಾಮದಲ್ಲಿರುವ ನೀಲಗಿರಿ ತೋಪಿನಲ್ಲಿ  ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ರೈತರಾದ ಹನುಮಂತರಾಯಪ್ಪ, ಮಂಗಳಗೌರಮ್ಮ, ವಿಶ್ವನಾಥ್, ಗೋವಿಂದರಾಜು, ನಾರಾಯಣಪ್ಪಗೆ ಸೇರಿದ ಸುಮಾರು ಹತ್ತಕ್ಕೂ ಅಧಿಕ ಎಕರೆ ಬೆಂಕಿಗೆ ಅಹುತಿಯಾಗಿದೆ. ಘಟನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ನೀಲಗಿರಿ ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಡಾಬಸ್ ಪೇಟೆ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

2 ಲಕ್ಷ ರೈತರ 868 ಕೋಟಿ ಸಾಲ ಮನ್ನಾ?