Publish Date: Sat, 23 Feb 2019 (17:09 IST)
Updated Date: Sat, 23 Feb 2019 (17:14 IST)
ಬಂಡೀಪುರ ಅರಣ್ಯದಲ್ಲಿ ಮತ್ತೆ ಅಗ್ನಿಯ ರುದ್ರ ನರ್ತನ ಕಾಣಿಸಿಕೊಂಡಿದೆ. ಇದರಿಂದಾಗಿ ಸುತ್ತಲಿನ ಜನರು ಹಾಗೂ ವಾಹನಗಳ ಸವಾರರು ಪರದಾಡುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಊಟಿ ಹೆದ್ದಾರಿಯಲ್ಲಿ ಸಂಚಾರ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 67ರ ಬಳಿಯಲ್ಲೇ ಹೊತ್ತಿ ಉರಿಯುತ್ತಿರುವ ಅರಣ್ಯದಿಂದಾಗಿ ಸುತ್ತೆಲ್ಲ ದಟ್ಟ ಹೊಗೆ ಆವರಿಸಿದೆ. ಮೆಲುಕಾಮನಹಳ್ಳಿ ಬಳಿಯಲ್ಲೇ ವಾಹನಗಳನ್ನು ತಡೆಯುತ್ತಿರುವ ಸಿಬ್ಬಂದಿ, ಸಂಚಾರ ಸ್ಥಗಿತಗೊಳಿಸಿದ್ದಾರೆ.
ಮೆಲುಕಾಮನಹಳ್ಳಿ, ಜಕ್ಕಳ್ಳಿ, ಮಂಗಲ ಪ್ರದೇಶದ ಸುತ್ತಲಿನ ಗುಡ್ಡಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾಗಿದ್ದರೂ, ಕೆನ್ನಾಲಿಗೆ ವ್ಯಾಪಕವಾಗಿ ಚಾಚಿರುವುದರಿಂದ ಬೆಂಕಿ ನಂದಿಸಲು ಹೆಚ್ಚಿನ ಶ್ರಮ ಪಡಬೇಕಾಗಿದೆ.