Select Your Language

Notifications

webdunia
webdunia
webdunia
webdunia

ಮೂರು ಮನೆಗಳು ಹೊತ್ತಿ ಉರಿದದ್ಯಾಕೆ?

webdunia
ದಾವಣಗೆರೆ , ಮಂಗಳವಾರ, 26 ಫೆಬ್ರವರಿ 2019 (16:16 IST)
ಆ ಮನೆಯಲ್ಲಿನ ಬೆಂಕಿಯ ಅವಘಡ ಮೂರು ಕುಟುಂಬಗಳನ್ನು ಬೀದಿಪಾಲು ಮಾಡಿದೆ. ಬೆಂಕಿಯ ಕೆನ್ನಾಲಿಗೆಯಿಂದಾಗಿ ಅವರು ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ.

ಆಕಸ್ಮಿಕ ಬೆಂಕಿಗೆ ಮೂರು ಮನೆಗಳು ಹೊತ್ತು ಉರಿದಿವೆ. ಮನೆಯೊಂದರಲ್ಲಿನ ಎರಡು ಸಿಲಿಂಡರ್ ಸ್ಟೋಟಗೊಂಡಿವೆ. ಪರಿಣಾಮ ಈ ದುರಂತ ನಡೆದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸತ್ಯಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ.
ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿ ಶಾಮಕ ದಳದ ಸಿಬ್ಬಂದಿ ಯತ್ನ ನಡೆಸಿದರು.

ಹರಿಹರ ನಗರದ ಗುತ್ತೂರು ಕಾಲೋನಿಯಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಹೊರ ಓಡಿ ಬಂದ ಮನೆಯವರು ಜೀವ ಉಳಿಸಿಕೊಂಡಿದ್ದಾರೆ. ಮನೆಯಲ್ಲಿ ಬೆಂಕಿ‌ಕಾಣಿಸಿಕೊಂಡಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ.  
Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆ ಕೇಳಿದ್ದಕ್ಕೆ ಕಣ್ಣಿದ ಖಾರದ ಪುಡಿ ಎರಚಿ ಮಾಡಿದ್ದೇನು ಗೊತ್ತಾ?