Publish Date: Tue, 26 Feb 2019 (11:41 IST)
Updated Date: Tue, 26 Feb 2019 (11:43 IST)
ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಇಂದು ಬೆಳಗಿನ ಜಾವ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದು ನಿಜ ಎಂದು ವಿದೇಶಾಂಗ ಸಚಿವಾಲಯದಿಂದ ಸರ್ಕಾರದ ಪರವಾಗಿ ಅಧಿಕೃತ ಹೇಳಿಕೆ ನೀಡಿದೆ.
ಬಾಲಾಕೋಟ್ ನಲ್ಲಿ ಉಗ್ರರ ಕ್ಯಾಂಪ್ ಮೇಲೆ ವಾಯು ಸೇನೆ ದಾಳಿ ನಡೆಸಿದ್ದೇವೆ. ಜೈಶ್ ಉಗ್ರರನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆದಿದೆ. ದಾಳಿಯಲ್ಲಿ ಉಗ್ರ ಮೌಲಾನಾ ಯೂಸಫ್ ಅಜರ್ ಸೇರಿದಂತೆ ಹಲವು ಉಗ್ರರ ಹತ್ಯೆಯಾಗಿದೆ. ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ವಿಜಯ್ ಗೋಖಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಪತ್ರಕರ್ತರು ಹೆಚ್ಚಿನ ಪ್ರಶ್ನೆಗಳು ಕೇಳಿದಾಗ ಸದ್ಯಕ್ಕೆ ಇದರ ಬಗ್ಗೆ ಉತ್ತರಿಸುವುದಿಲ್ಲ ಎಂದಿದ್ದಾರೆ. ಸದ್ಯದಲ್ಲೇ ಈ ಬಗ್ಗೆ ಸದ್ಯದಲ್ಲೇ ನಿಮಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದಷ್ಟೇ ಹೇಳಿದ್ದಾರೆ
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.